ಕರ್ನಾಟಕ

ಉ.ಪ್ರ. ವಿಧಾನಸಭೆ: 143 ಎಸ್ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Pinterest LinkedIn Tumblr

elections-715x400ಲಕ್ನೋ, ಮಾ. ೨೬ – ಉತ್ತರ ಪ್ರದೇಶದಲ್ಲಿ 2017ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಆಡಳಿತಾರೂಢ ಸಮಾಜವಾದಿ ಪಕ್ಷ 143 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಅಭ್ಯರ್ಥಿಗಳ ಪಟ್ಟಿ ಇಷ್ಟೊಂದು ಮುಂಚಿತವಾಗಿ ಬಿಡುಗಡೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ವಕ್ತಾರ ಶಿವಪಾಲ್ ಸಿಂಗ್ ಯಾದವ್, ಪ್ರಸ್ತುತ ಶಾಸಕರಾಗಿರುವ ಯಾರ ಹೆಸರೂ ಈ ಪಟ್ಟಿಯಲ್ಲಿ ಇಲ್ಲ. ಎಲ್ಲ ಹೊಸಬರನ್ನೇ ಸ್ಪರ್ಧೆಗೆ ಇಳಿಸಲು ನಿರ್ಧರಿಸಲಾಗಿದ್ದು, ಅವರು ಈಗಿನಿಂದಲೇ ಅವರವರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ ಎಂಬ ಉದ್ದೇಶದಿಂದ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪಟ್ಟಿಯಲ್ಲಿ 27 ಮಂದಿ ಮುಸ್ಲಿಂ, 18 ಯಾದವ, 12 ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ. ಈ ಪೈಕಿ 21 ಕ್ಷೇತ್ರಗಳು ಮೀಸಲಾತಿ ಹೊಂದಿವೆ.

ರಾಜ್ಯದಲ್ಲಿ ಒಟ್ಟು 403 ಕ್ಷೇತ್ರಗಳಿದ್ದು, ಮತ್ತೊಮ್ಮೆ ಎಸ್ಪಿ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದೆ.

ಟಿಕೆಟ್ ಘೋಷಣೆಯಾಗಿರುವವರ ಪೈಕಿ ದೆಹಲಿ ಜಮ್ಮು ಮಸೀದಿಯ ಸೈಯದ್ ಅಹಮದ್ ಬುಕಾರಿಯ ಅಳಿಯ ಉಮರ್ ಅಲಿ ಖಾನ್ ಪ್ರಮುಖರು.

ಪಕ್ಷದ ಮೂಲಗಳ ಪ್ರಕಾರ 2012 ರಲ್ಲಿ ಸ್ಪರ್ಧಿಸಿದ್ದ 85 ಮಂದಿ ಅಭ್ಯರ್ಥಿಗಳನ್ನು ಮತ್ತೆ ಕಣಕ್ಕೆ ಇಳಿಸಿಲ್ಲ ಎಂಬುದು ವಿಶೇಷ.

Write A Comment