ಕರ್ನಾಟಕ

ಈತನಿಗೆ ವಿಜ್ಞಾನಿಯಾಗುವ ಕನಸು: ಬಡತನದ ಬೇಗೆಯಲ್ಲಿ ಅರಳಿದ ಗ್ರಾಮೀಣ ಪ್ರತಿಭೆಗೆ ಚಿನ್ನದ ಪದಕ

Pinterest LinkedIn Tumblr

25hdl11ep––ALL--PAGE-3ಹೂವಿನಹಡಗಲಿ: ಸ್ನಾತಕೋತ್ತರ ಪದವಿಯಲ್ಲಿ (ರಸಾಯನ ವಿಜ್ಞಾನ) ದಾವಣಗೆರೆ ವಿಶ್ವವಿದ್ಯಾ ಲಯಕ್ಕೆ ಪ್ರಥಮ ರ‍್ಯಾಂಕ್‌ ಗಳಿಸಿ ಚಿನ್ನದ ಪದಕ ಪಡೆದಿರುವ ತಾಲ್ಲೂಕಿನ ಮುದೇ ನೂರು ಗ್ರಾಮದ ಗುಡ್ಡಪ್ಪ ಹಳ್ಳಿಗೌಡ್ರ ಅವರಿಗೆವಿಜ್ಞಾನಿಯಾಗಬೇಕೆಂಬ ಬಯಕೆ.
ಆದರೆ ಆರ್ಥಿಕ ಸಂಕಷ್ಟದಲ್ಲಿರುವ ಅವರ ಕನಸು ನನಸಾಗಿಸಲು ಅವರಿಗೆ ನೆರವಿನ ಅವಶ್ಯಕತೆಯಿದೆ. ಗುಡ್ಡಪ್ಪನ ತಂದೆ ನೀಲಪ್ಪ ಕುರಿಗಳನ್ನು ಸಾಕಿದ್ದು , ಅವುಗಳನ್ನು ಮಾರಾಟ ಮಾಡಿ ಮಗನ ಶಿಕ್ಷಣಕ್ಕೆ ನೆರವಾದರೆ, ತಾಯಿ ಪಾರ್ವತಮ್ಮ ಕೃಷಿಯಲ್ಲಿ ತೊಡಗಿ ನೆರವಾಗಿದ್ದಾರೆ. ಈಗ ಅವರ ಬಳಿ ಕುರಿಗಳಿಲ್ಲ, ಹೀಗಾಗಿ ಮಗನ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ.
ಗುಡ್ಡಪ್ಪ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣವನ್ನು ಮೈಸೂ ರಿನ ಸುತ್ತೂರು ಮಠದ ಶಾಲೆಯಲ್ಲಿ ಪೂರೈಸಿದ್ದಾರೆ. ಹರಪನಹಳ್ಳಿಯ ಎಸ್‌.ಯು.ಜೆ.ಎಂ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಹಾಗೂ ಎ.ಡಿ.ಬಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಗುಡ್ಡಪ್ಪ ಸ್ನಾತಕೋತ್ತರ ಪದವಿ ಪಡೆದಿದ್ದರೆ, ಇವರ ಕಿರಿಯ ಸಹೋದರ ಎಂಜಿನಿ ಯರಿಂಗ್ ಓದುತ್ತಿದ್ದಾರೆ.
ಅವಶ್ಯಕತೆಗೆ ತಕ್ಕಂತೆ ಕುರಿಗಳನ್ನು ಮಾರಾಟ ಮಾಡು ತ್ತಲೇ ಈವರೆಗಿನ ಮಕ್ಕಳ ಶಿಕ್ಷಣದ ಖರ್ಚನ್ನು ನೀಲಪ್ಪ ನಿಭಾಯಿಸಿದ್ದಾರೆ. ಇದಲ್ಲದೇ ಸೋಗಿ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 5 ಎಕರೆ ಜಮೀನಿನ ಮೇಲೆ ಸಾಲ ಪಡೆದಿದ್ದಾರೆ. ಇದೀಗ ಕುರಿ ಹಟ್ಟಿಯೂ ಖಾಲಿಯಾಗಿದ್ದು, ಬ್ಯಾಂಕ್‌, ಖಾಸಗಿ ಸಾಲದ ಭಾರವೂ ಹೆಚ್ಚಾಗಿದೆ.
‘ಹೆಚ್ಚು ಶ್ರಮಪಟ್ಟಿದ್ದರಿಂದ ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು, ಆದರೆ ರ‍್ಯಾಂಕ್‌ ನಿರೀಕ್ಷಿಸಿರಲಿಲ್ಲ. ಕಷ್ಟ ಅನುಭವಿಸಿ ನನ್ನ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತ ತಂದೆ–ತಾಯಿಗಳು ಈ ಸಾಧನೆಗೆ ಕಾರಣ’ ಎಂದು ಗುಡ್ಡಪ್ಪ ಭಾವುಕರಾಗಿ ಹೇಳಿದರು.
‘ಹರಪನಹಳ್ಳಿ ಕಾಲೇಜಿನ ಉಪ ನ್ಯಾಸಕಿ ಶೈಲಜಾ ಮೇಡಂ ಮಾರ್ಗ ದರ್ಶನ ನೀಡಿದ್ದರಿಂದ ರ‍್ಯಾಂಕ್‌ ಗಳಿಸಲು ನೆರವಾಯಿತು. ಇದೀಗ ಪಿಎಚ್‌.ಡಿ ಪ್ರವೇಶ ಪರೀಕ್ಷೆಯಲ್ಲೂ ಉತ್ತೀರ್ಣ ನಾಗಿದ್ದು, ಪಿಎಚ್‌.ಡಿ ಪದವಿ ಪಡೆದು ವಿಜ್ಞಾನಿ ಆಗುವ ಕನಸಿದೆ’ ಎಂದರು.
ನೆರವಿನ ನಿರೀಕ್ಷೆಯಲ್ಲಿ…
ಕಡುಬಡತನದ ನಡುವೆಯೂ ಚಿನ್ನದ ಸಾಧನೆ ಮಾಡಿರುವ ಗುಡ್ಡಪ್ಪ ಅವರ ಪಿಎಚ್‌.ಡಿ ಕನಸು ನನಸಾಗಲು ದಾನಿಗಳು, ಶಿಕ್ಷಣ ಪ್ರೇಮಿಗಳ ನೆರವು ಬೇಕಾಗಿದೆ. ನೆರವಾಗಲು ಇಚ್ಛಿಸುವವರು ಗುಡ್ಡಪ್ಪ ಅವರನ್ನು (81508 26040) ಸಂಪರ್ಕಿಸಬಹುದು.

Write A Comment