ಕರ್ನಾಟಕ

ಪೊಲೀಸರ ಭರ್ಜರಿ ಬೇಟೆ, 6 ಮಂದಿ ಸೆರೆ

Pinterest LinkedIn Tumblr

26Kalasipalya1clrಬೆಂಗಳೂರು, ಮಾ. ೨೬ – ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಅಂತರ್‌ರಾಜ್ಯ ಗ್ಯಾಂಗ್‌ನ ನಾಲ್ವರು ಕಳ್ಳರು ವಾಹನ ಕಳ್ಳ, ಟೈರ್ ಕಳ್ಳ ಸೇರಿ ೬ ಮಂದಿಯನ್ನು ಬಂಧಿಸಿ ಭರ್ಜರಿ ಭೇಟೆಯಾಡಿರುವ ಪಶ್ಚಿಮ ವಿಭಾಗದ ಪೊಲೀಸರು ೩೯ ಲಕ್ಷ ಮೌಲ್ಯದ ಮಾಲುಗಳು, ಪಿಸ್ತೂಲು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿಯ ಮದನ್‌ಗಿರಿಯ ಅಶೋಕ್ ಕುಮಾರ್ (೨೫), ಧರ್ಮಲಿಂಗಂ (೪೭), ಅರುಣ್ ಕುಮಾರ್ (೨೫), ಮೈಕಲ್ (೨೪) ಬಂಧಿತ ಅಂತರ್‌ರಾಜ್ಯ ಗ್ಯಾಂಗ್‌ನ ಕಳ್ಳರಾಗಿದ್ದಾರೆ.
ಅವರಿಂದ ೨೪ ಲಕ್ಷ ಮೌಲ್ಯದ ೬೪೦ ಗ್ರಾಂ ಚಿನ್ನ, ೧ ಕೆಜಿ ಬೆಳ್ಳಿ, ಪಿಸ್ತೂಲ್, ಜೀವಂತ ಗುಂಡುಗಳು, ನಗದು, ಮಾರುತಿ ಇಕೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಅವರು ತಿಳಿಸಿದ್ದಾರೆ.
ಆರೋಪಿಗಳು ಕಳೆದ ಫೆ. ೨೪ ರಂದು ಕಾರ್ಪೋರೇಷನ್ ವೃತ್ತದ ಬಳಿ ನಾಗರಾಜು ಎಂಬುವವರಿಗೆ ಕಾರಿನ ಟೈರ್ ಪಂಚರ್ ಆಗಿದೆ ಎಂದು ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ೨ ಲಕ್ಷ ೨೮ ಸಾವಿರ ಬೆಲೆಯ ೬ ಕೆಜಿ ತೂಕದ ಬೆಳ್ಳಿ ಟ್ರೋಫಿಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಲಾಸಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮತ್ತವರ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ. ಇದರಲ್ಲಿ ಧರ್ಮಲಿಂಗಂ ಹಾಗೂ ಅರುಣ್ ಕುಮಾರ್ ತಂದೆ – ಮಗನಾಗಿದ್ದಾನೆ.
ಈ ಗ್ಯಾಂಗ್‌ನಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ರಾಹುಲ್, ಅಮರ್‌ನಾಥ್, ಸೆಲ್ವಂ, ಪನ್ನೀರ್ ಸೇರಿ ನಾಲ್ವರಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಆರೋಪಿಗಳ ಬಂಧನದಿಂದ ಕಲಾಸಿಪಾಳ್ಯದ ೬, ನಗರದ ಇತರೆ ಪೊಲೀಸ್ ಠಾಣೆಗಳ ೧೩ ಸೇರಿ ೧೯ ಪ್ರಕರಣಗಳು ಪತ್ತೆಯಾಗಿವೆ.
ವಾಹನ ಕಳ್ಳನ ಸೆರೆ
ನಕಲಿ ಕೀ ಬಳಸಿ ಆಟೋ, ಬೈಕ್, ಸ್ಕೂಲರ್‌ಗಳನ್ನು ಕಳವು ಮಾಡುತ್ತಿದ್ದ ತಿಲಕ್ ನಗರದ ಸಂದೀಪ್ (೧೯) ಎಂಬಾತನನ್ನು ಬಂಧಿಸಿ ೧೨ ಲಕ್ಷ ೫೦ ಸಾವಿರ ಮೌಲ್ಯದ ೧೩ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಲಾಸಿಪಾಳ್ಯದ ಎಎಂ ರಸ್ತೆಯ ಶಾರದಮ್ಮ ಗೇಟ್ ಬಳಿ ಕಳವು ಮಾಡಿದ್ದ ದ್ವಿಚಕ್ರ ವಾಹನ ಒಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಕಲಾಸಿಪಾಳ್ಯ ಪೊಲೀಸರಿಗೆ ಆರೋಪಿಯು ಸಿಕ್ಕಿಬಿದ್ದಿದ್ದಾನೆ.
ಆರೋಪಿಯಿಂದ ೩ ಆಟೋ, ೪ ಹೋಂಡಾ ಆಕ್ಟೀವಾ, ೩ ಕೆನಟಿಕ್ ಹೋಂಡಾ, ಹೋಂಡಾ ಸ್ಪ್ಲೆಂಡರ್, ಬಜಾಜ್ ಕ್ಯಾಲಿಬರ್, ಯಮಹಾ, ಸುಜೂಕಿ ಸೇರಿದಂತೆ ೧೩ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ತಲೆಮರೆಸಿಕೊಂಡಿರುವ ಸಹಚರ ಹರೀಶ್‌ನೊಂದಿಗೆ ಸೇರಿ ಆಟೋಗಳನ್ನು ಕಳವು ಮಾಡಿದ್ದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಆರೋಪಿಯ ಬಂಧನದಿಂದ ೧೩ಕ್ಕೂ ಹೆಚ್ಚು ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಚರಣ್ ರೆಡ್ಡಿ ತಿಳಿಸಿದರು.
ಟೈರ್ ಕಳ್ಳನ ಬಂಧನ
ಸಿದ್ದಯ್ಯ ರಸ್ತೆಯ ಕಾವೇರಿ ಏಜೆನ್ಸಿಸ್ ಅಂಗಡಿಯ ರೋಲಿಂಗ್ ಶೆಟರ್ ಮುರಿದು ೨.೫ ಲಕ್ಷ ಮೌಲ್ಯದ ಟೈರ್ ಟ್ಯೂಬ್‌ಗಳನ್ನು ಕಳವು ಮಾಡಿದ್ದ ಕಲಾಸಿಪಾಳ್ಯದ ದೊರೆ
ರಾಜು (೨೪)ನನ್ನು ಬಂಧಿಸಲಾಗಿದೆ. ಆರೋಪಿಯಿಂದ ವಿವಿಧ ಕಂಪನಿಯ ಟೈರ್ ಟ್ಯೂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಂತರ್‌ರಾಜ್ಯ ಗ್ಯಾಂಗ್‌ನ ಕಳ್ಳರೂ ಸೇರಿ
ದಂತೆ ೬ ಮಂದಿಯನ್ನು ಬಂಧಿಸಿ ೩೯ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡ ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ಹಾಗೂ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮತ್ತವರ ತಂಡವನ್ನು ಚರಣ್ ರೆಡ್ಡಿ ಅಭಿನಂದಿಸಿ ನಗದು ಬಹುಮಾನ ನೀಡಿ ಗೌರವಿಸಿದರು.

Write A Comment