ಕರ್ನಾಟಕ

ಮಡಿಕೇರಿ; 24 ದಿನಗಳಲ್ಲಿ ನಾಲ್ವರನ್ನು ಕೊಂದಿದ್ದ ಕಾಡಾನೆ ಕೊನೆಗೂ ಸೆರೆ

Pinterest LinkedIn Tumblr

New-NNಮಡಿಕೇರಿ:ಕಳೆದ 24 ದಿನಗಳಲ್ಲಿ ನಾಲ್ವರು ಕೂಲಿ ಕಾರ್ಮಿಕರನ್ನು ತುಳಿದು ಕೊಂದು ಹಾಕಿದ್ದ ನರಹಂತಕ ಕಾಡಾನೆಯನ್ನು ಕೊನೆಗೂ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಭೂತನಕಾಡು ಕಾಫಿತೋಟದಲ್ಲಿ ಸೆರೆ ಹಿಡಿದಿದ್ದಾರೆ.

24 ದಿನಗಳಲ್ಲಿ ಕಾಡಾನೆ ದಾಳಿಗೆ ನಾಲ್ವರು ಕಾರ್ಮಿಕರು ಬಲಿಯಾಗಿದ್ದರು. ಕಾಡಾನೆ ಸೆರೆ ಹಿಡಿಯುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.

ಅಂತೂ ಸೋಮವಾರ ಪೇಟೆ ತಾಲೂಕಿನ ಕಾಫಿತೋಟದಲ್ಲಿ ಅರವಳಿಕೆ ಮದ್ದು ಸಿಡಿಸಿ ಅರಣ್ಯ ಸಿಬ್ಬಂದಿಗಳು ಕಾಡಾನೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.
ಉದಯವಾಣಿ

Write A Comment