ಕರ್ನಾಟಕ

27ಕ್ಕೆ ಮಿಸೆಸ್ ಇಂಡಿಯಾ- ಕರ್ನಾಟಕ ಫೈನಲ್

Pinterest LinkedIn Tumblr

CB-4ಬೆಂಗಳೂರು: ಸೌಂದರ್ಯ ನೋಡುವ ಕಣ್ಣಲ್ಲಿರುತ್ತದಂತೆ. ಆದರೆ, ನೋಡುವ ಕಣ್ಣಿಗೆ ಸೌಂದರ್ಯದ ಅನುಭೂತಿ ಆಗುವುದು ಹೇಗೆ? ಇದರಲ್ಲಿ ಅಂತರಂಗ ಹಾಗೂ ಬಹಿರಂಗ ಸೌಂದರ್ಯಗಳ ಪಾಲೆಷ್ಟು? ಅಂಥ ಸೌಂದರ್ಯವನ್ನು ಬಹಿರಂಗವಾಗಿ ತೋರಿಕೊಂಡಾಗ ಮೂಡುವಂಥ ಆತ್ಮವಿಶ್ವಾಸದ ಎಂಥದ್ದು?.. ಹೀಗೆ ಕೇಳಿಕೊಳ್ಳುತ್ತ ಹೋದರೆ ಉತ್ತರ ಜಟಿಲವಾಗುತ್ತ ಹೋಗುತ್ತದೆ. ಜಟಿಲತೆಗೆ ಸಿಲುಕುವ ಬದಲಿಗೆ, ‘ಯಾಕೆ ಒಂದು ಸೌಂದರ್ಯ ಸ್ಪರ್ಧೆ’ಯನ್ನೇ ಏರ್ಪಡಿಸಬಾರದು ಎಂಬ ಸವಾಲಿಗೆ ತಮ್ಮನ್ನು ಒಡ್ಡಿಕೊಂಡವರು ಪ್ರತಿಭಾ ಸಂಶಿಮಠ.

50ರ ಹರೆಯದ ಪ್ರತಿಭಾ, 2015ರ ‘ಮಿಸೆಸ್ ಇಂಡಿಯಾ’ ಕಿರೀಟ ಗೆದ್ದ ಹೆಮ್ಮೆಯ ಕನ್ನಡತಿ. ಇಂಥ ಸಾಧನೆ ಮಾಡಿದ ದಕ್ಷಿಣ ಭಾರತದ ಮೊದಲ ಮಹಿಳೆ ಎಂಬ ಗರಿಮೆ ಹೊತ್ತವರು. ಕುಟುಂಬ ಮತ್ತು ಮಕ್ಕಳು ಎಂದು ಅದರಲ್ಲೇ ಕಳೆದುಹೋಗದೆ ‘ನಾನೂ ಏನಾದರೂ ಮಾಡಿ ತೋರಿಸಬೇಕು’ ಎಂಬ ಛಲದೊಂದಿಗೆ ಪ್ರತಿಭಾ ‘ಮಿಸೆಸ್ ಇಂಡಿಯಾ- ಕರ್ನಾಟಕ’ ಸೌಂದರ್ಯ ಸ್ಪರ್ಧೆ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಆಡಿಷನ್ಸ್ ಕಾರಣಕ್ಕಾಗಿ ಸುದ್ದಿಯಾದ ಈ ಸ್ಪರ್ಧೆ, ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಮಾ.27ಕ್ಕೆ ಮಾರತ್ತಹಳ್ಳಿಯ ಕಾರ್ಟರ್ ಹೋಟೆಲ್ ಆಂಡ್ ರೆಸಾರ್ಟ್ಸ್​ನಲ್ಲಿ ಸಂಜೆ 6ಕ್ಕೆ ‘ಮಿಸೆಸ್ ಇಂಡಿಯಾ- ಕರ್ನಾಟಕ’ದ ಫೈನಲ್ಸ್ ನಡೆಯಲಿದೆ.

ವಿಜಯವಾಣಿ ಮಾಧ್ಯಮ ಸಹಯೋಗವಿರುವ ಈ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ಗೃಹಿಣಿಯರು ಭಾಗವಹಿಸಿದ್ದು ವಿಶೇಷ. ಅವರಲ್ಲಿ 28 ಮಂದಿಯನ್ನು ಅಂತಿಮ ಸುತ್ತಿಗಾಗಿ ಆಯ್ಕೆ ಮಾಡಲಾಗಿದೆ. 45 ವಯಸ್ಸಿನೊಳಗಿನವರು (3 ವಿನ್ನರ್​ಗಳು, 3 ರನ್ನರ್ ಅಪ್​ಗಳು), 45-60 ವಯಸ್ಸಿನೊಳಗಿನವರು (3 ವಿನ್ನರ್​ಗಳು, 2 ರನ್ನರ್​ಅಪ್​ಗಳು) ಹಾಗೂ 60ಕ್ಕಿಂತ ಹೆಚ್ಚು ವಯಸ್ಸಿನವರು (3 ವಿನ್ನರ್​ಗಳು, ಒಬ್ಬ ರನ್ನರ್ ಅಪ್) ಎಂದು 3 ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದೆ. ಮೊದಲೆರಡು ವಿಭಾಗಗಳಲ್ಲಿನ ಸುಂದರಿಯರು ರಾಷ್ಟ್ರಮಟ್ಟದ ಮಿಸೆಸ್ ಇಂಡಿಯಾಗೆ ಅರ್ಹತೆ ಗಳಿಸಲಿದ್ದಾರೆ ಎಂದು ಮಾಹಿತಿ ಕೊಡುತ್ತಾರೆ ಪ್ರತಿಭಾ. ಕಿರುತೆರೆ ನಟಿಯರಿಗಾಗಿ ‘ಸಿನಿರೌಂಡ್’ ಅನ್ನೂ ಆಯೋಜಿಸಲಾಗಿದೆ.

ಮಿಸೆಸ್ ಇಂಡಿಯಾ- ಕರ್ನಾಟಕ’ದ ಪ್ರಚಾರ ರಾಯಭಾರಿ ಗಿರಿಜಾ ಲೋಕೇಶ್. ಎಲ್ಲ ವಯೋಮಾನದವರಿಗೂ ಅವಕಾಶ ಕೊಡುತ್ತಿರುವ ಕಾರಣಕ್ಕಾಗಿ ಖುಷಿಗೊಂಡು ಈ ಹೊಣೆ ಒಪ್ಪಿಕೊಂಡಿದ್ದಾರಂತೆ ಅವರು. ‘ಮೊದಲ ವರ್ಷಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿರೋದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಇನ್ನು ಈ ಸ್ಪರ್ಧೆ ಪ್ರತಿವರ್ಷ ನಡೆಯಲಿದೆ.
|ಪ್ರತಿಭಾ ಸಂಶಿಮಠ ಆಯೋಜಕಿ

Write A Comment