ರಾಷ್ಟ್ರೀಯ

ಬಾಂಗ್ಲಾಗೆ ವಿದ್ಯುತ್, ಭಾರತಕ್ಕೆ ಇಂಟರ್​ನೆಟ್

Pinterest LinkedIn Tumblr

National-96ಢಾಕಾ/ಅಗರ್ತಲಾ: ಸಕಾರಾತ್ಮಕವಾಗಿ ಸಾಗುತ್ತಿರುವ ಭಾರತ- ಬಾಂಗ್ಲಾದೇಶ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಬುಧವಾರ ಮಹತ್ವದ ಹೆಜ್ಜೆ ಇಟ್ಟಿವೆ. ತ್ರಿಪುರಾದಿಂದ ಬಾಂಗ್ಲಾದೇಶಕ್ಕೆ 100 ಮೆಗಾವಾಟ್ ವಿದ್ಯುತ್ ಪೂರೈಕೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರೆ, ಭಾರತಕ್ಕೆ 10 ಜಿಬಿಪಿಎಸ್ ಇಂಟರ್ನೆಟ್ ಬ್ಯಾಂಡ್​ವಿಡ್ತ್ ಒದಗಿಸುವ ಯೋಜನೆಯನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಿದರು.

ತ್ರಿಪುರಾದ ಪಾಲತನದಿಂದ ಬಾಂಗ್ಲಾದೇಶದ ಕೊಮಿಲ್ಲಗೆ ವಿದ್ಯುತ್ ಪೂರೈಸುವ ಯೋಜನೆಯನ್ನು ನವದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ಉದ್ಘಾಟಿಸಿದರು. ಇದೇ ವೇಳೆ, ಬಾಂಗ್ಲಾದ ಕಾಕ್ಸ್ ಬಜಾರ್​ನಿಂದ ಅಗರ್ತಲಾಗೆ ಇಂಟರ್ನೆಟ್ ಬ್ಯಾಂಡ್​ವಿಡ್ತ್ ಪೂರೈಕೆಗೆ ಢಾಕಾದಿಂದ ಶೇಖ್ ಹಸೀನಾ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ದೇಶದ 3ನೇ ಅಂತಾರಾಷ್ಟ್ರೀಯ ಅಂತರ್ಜಾಲ ಗೇಟ್​ವೇಯಾಗಿರುವ ಈ ಯೋಜನೆ 8 ಈಶಾನ್ಯ ರಾಜ್ಯಗಳಿಗೆ ಇಂಟರ್ನೆಟ್ ಸೇವೆ ಒದಗಿಸಲಿದ್ದು, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಉಪಸ್ಥಿತರಿದ್ದರು.

ಬಾಹ್ಯಾಕಾಶಕ್ಕೆ ನಂಟು ವಿಸ್ತರಿಸಲಿ: ಪರಸ್ಪರ ಅವಲಂಬನೆಯ ಮೂಲಕ ಬೆಳವಣಿಗೆ ಸಾಧಿಸ ಬೇಕಾಗಿರುವ ಈ ಅವಧಿಯಲ್ಲಿ ಉಭಯ ದೇಶಗಳು ಅಭಿವೃದ್ಧಿ ಪಥದಲ್ಲಿ ಒಟ್ಟಾಗಿ ಸಾಗಲು ಈ ದಿನ ಮಹತ್ವದ ಹೆಜ್ಜೆ ಇರಿಸಿದ್ದೇವೆ. ಎರಡೂ ರಾಷ್ಟ್ರಗಳು ಜಲ, ಭೂ ಪ್ರದೇಶ ಹಾಗೂ ವಾಯು ಸಂಪರ್ಕವನ್ನು ಹೊಂದಿದ್ದು ಬಾಹ್ಯಾಕಾಶ ಯೋಜನೆಗಳ ಮೂಲಕ ಅಂತರಿಕ್ಷದಲ್ಲೂ ಸಂಪರ್ಕ ಸಾಧಿಸುವಂತಾಗಬೇಕು ಎಂದು ಮೋದಿ ಅಭಿಪ್ರಾಯಪಟ್ಟರು. ಅಲ್ಲದೆ, ಮಾ.26ರಂದು ರಾಷ್ಟ್ರೀಯ ದಿನ ಆಚರಿಸುತ್ತಿರುವ ಬಾಂಗ್ಲಾದೇಶಕ್ಕೆ ಶುಭ ಹಾರೈಸಿದ ಅವರು, ಬಾಂಗ್ಲಾ ದೇಶದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಕೊಡá-ಗೆಯನ್ನು ಸ್ಮರಿಸಿದರು.

ವಿದ್ಯುತ್ ಹಾಗೂ ಅಂತರ್ಜಾಲ ವಿನಿಮಯ ಯೋಜನೆ ಭಾರತ- ಬಾಂಗ್ಲಾ ಸಂಬಂಧಕ್ಕೆ ಹೊಸ ಭಾಷ್ಯ ಬರೆದಿದೆ. ಈ ಸಂಪರ್ಕ ಯೋಜನೆಯ ಜತೆಗೆ ಭಾವನಾತ್ಮಕವಾಗಿಯೂ ಉಭಯ ರಾಷ್ಟ್ರಗಳ ನಂಟು ಬಲಪಡಬೇಕಿದೆ.

| ಶೇಖ್ ಹಸೀನಾ ಬಾಂಗ್ಲಾ ಪ್ರಧಾನಿ

Write A Comment