ಕರ್ನಾಟಕ

ಬೆಂಗಳೂರಿಗೆ ಬರುತ್ತಿದೆ ಕೋಟಿ ರೂ. ಬೆಲೆಯ ನಾಯಿ!

Pinterest LinkedIn Tumblr

DOG

ಬೆಂಗಳೂರು: ನಾಯಿಗಳ ಬಗ್ಗೆ ಅಗಾಗಾ ಸುದ್ದಿ ಆಗ್ತಾನೆ ಇರುತ್ತೆ. ಆದ್ರೆ ಇಲ್ಲೊಬ್ರು ಕ್ರೇಜಿ ಮ್ಯಾನ್ ಈಗ ನಾಯಿಯಿಂದ ಸಖತ್ ಸೌಂಡ್ ಮಾಡ್ತಿದ್ದಾರೆ. ಬರೋಬ್ಬರಿ 2 ಕೋಟಿ ರೂ. ನೀಡಿ ನಾಯಿಗಳನ್ನು ಚೈನಾದಿಂದ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ.

ಬನಶಂಕರಿಯ ನಿವಾಸಿ ಸತೀಶ್ ಚೈನಾದಿಂದ 2 ಕೋಟಿ ರೂ. ಕೊಟ್ಟು ದೋಸಾ ಅಥವಾ ಕೊರಿಯನ್ ಮ್ಯಾಸ್ಚೀಫ್ ತಳಿಗೆ ಸೇರಿದ ಒಂದು ಗಂಡು, ಒಂದು ಹೆಣ್ಣು ನಾಯಿಯನ್ನು ಬೆಂಗಳೂರಿಗೆ ತರುತ್ತಿದ್ದಾರೆ. ಬುಧವಾರ ಬೆಳಗ್ಗೆ ಈ ದುಬಾರಿ ನಾಯಿ ಬೆಂಗಳೂರು ತಲುಪಲಿದ್ದು, ಇದನ್ನು ಮೂರುವರೆ ಕೋಟಿ ರೂ.ಗಿಂತಲೂ ಹೆಚ್ಚು ಬೆಲೆಬಾಳುವ ಬೆಂಟ್ಲಿ ಹಾಗೂ ರಾಲ್ಸ್ರಾಯ್ಸ್ ಕಾರಿನಲ್ಲಿ ಏರ್ಪೋರ್ಟ್ನಿಂದ ಮೆರವಣಿಗೆ ಮೂಲಕ ಬನಶಂಕರಿಗೆ ತರುತ್ತಾರಂತೆ.

ಡಾಗ್ ಬ್ರೀಡರ್ ಆಗಿರುವ ಸತೀಶ್ ತಾವು ತಂದ ಕಾಸ್ಟ್ಲಿ ನಾಯಿಗಳನ್ನು ಬೇರೆಯವರಿಗೆ ಉಚಿತವಾಗಿ ನೀಡ್ತಾರೆ. ತದನಂತರ ಅದರ ಮರಿಗಳನ್ನು ಪಡೆದುಕೊಂಡು ಸೇಲ್ ಮಾಡ್ತಾರೆ. ಸದ್ಯ ಇವರ ಬಳಿ 60 ಲಕ್ಷ 50 ಲಕ್ಷ ರೂ. ಬೆಲೆಬಾಳುವ ನಾಯಿಗಳು ಇದೆ. ಈ ಸ್ಪೆಷಲ್ ಬ್ರೀಡ್ ನಾಯಿ ಇಂಡಿಯಾದಲ್ಲಿ ಇಲ್ಲ ಎನ್ನುವ ಸತೀಶ್ಗೆ ದುಬಾರಿ ನಾಯಿ ಕ್ರೇಜ್ ಜಾಸ್ತಿಯಂತೆ. ಈ ದೋಸಾ ನಾಯಿಗೆ ಎರಡು ತಿಂಗಳಾಗಿದ್ದು, ತಿಂಗಳಿಗೆ ಇದರ ನಿರ್ವಹಣೆಗೆ ಏನಿಲ್ಲವೆಂದರೂ 50 ಸಾವಿರ ರೂ. ಬೇಕಂತೆ. ಒಟ್ಟಿನಲ್ಲಿ ಬುಧವಾರ ದುಬಾರಿ ನಾಯಿಗಳು ನಮ್ಮ ಬೆಂಗಳೂರು ತಲುಪಲಿದೆ.

ಸೆಲ್ಫೀ ಕ್ಲಿಕ್ಕಿಸಬಹುದು: ಮೆರವಣಿಗೆಯಲ್ಲಿ ಈ ನಾಯಿಯನ್ನು ನೋಡಿದರೆ ಫ್ರೀ, ಮುಂದೆ ಸತೀಶ್ ಮನೆಯಲ್ಲಿ ನೋಡಬೇಕು ಎಂದರೆ ಅಥವಾ ಸೆಲ್ಫಿ ಕ್ಲಿಕ್ ಮಾಡಬೇಕು ಎಂದರೆ ನೀವು 500 ರೂಪಾಯಿ ನೀಡಬೇಕು.

Write A Comment