ರಾಷ್ಟ್ರೀಯ

ಕಡಿಮೆ ಬೆಲೆಯ ಹೊಸ ಐಫೋನ್ಗೆ ಭಾರತದಲ್ಲಿ ಎಷ್ಟು ರೂ.ಗೊತ್ತಾ…?

Pinterest LinkedIn Tumblr

iphone

ಸ್ಯಾನ್ಫ್ರಾನ್ಸಿಸ್ಕೋ: ಸ್ಮಾರ್ಟ್ಫೋನ್ ದಿಗ್ಗಜ ಆಪಲ್ ಕಂಪೆನಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಐಫೋನ್ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಐಫೋನ್ ಎಸ್ಇ ಬಿಡುಗಡೆ ಮಾಡಿದೆ.

ಅಮೆರಿಕದಲ್ಲಿ ಭಾರತೀಯ ಕಾಲಮಾನ ಸೋಮವಾರ ರಾತ್ರಿ ಬಿಡುಗಡೆಯಾಗಿದ್ದು 16 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಆಪಲ್ 39 ಸಾವಿರ ರೂ. ನಿಗದಿ ಮಾಡಿದ್ದು ಏಪ್ರಿಲ್ ಮೊದಲ ವಾರದಿಂದ ಈ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಸಿಂಗಲ್ ನ್ಯಾನೋ ಸಿಮ್ ಹಾಕಬಹುದಾದ ಸ್ಮಾರ್ಟ್ಫೋನ್ ಇದಾಗಿದ್ದು 113 ಗ್ರಾಂ ತೂಕವಿದೆ. ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಫೋನ್ ಹೊಂದಿದ್ದು 3ಜಿ ನೆಟ್ವರ್ಕ್ನಲ್ಲಿ 14 ಗಂಟೆ ಟಾಕ್ ಟೈಂ ಹೊಂದಿದೆ.

ಅಮೆರಿಕದಲ್ಲಿ 16 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್ಫೋನಿಗೆ 399 ಡಾಲರ್( ಅಂದಾಜು 30 ಸಾವಿರ ರೂ.) 64 ಜಿಬಿ ಫೋನಿಗೆ 499 ಡಾಲರ್( ಅಂದಾಜು 33,500 ರೂ.) ನಿಗದಿ ಮಾಡಿದೆ.

ಬೇರೆ ಕಂಪೆನಿಯ ಹೊಸ ಸ್ಮಾರ್ಟ್ಫೋನ್ಗಳಿಗೆ ಹೋಲಿಕೆ ಮಾಡಿದರೆ ಐಫೋನ್ ಎಸ್ಇ ಫೋನಿನ ಬೆಲೆ ದುಬಾರಿಯಾದರೂ, ಆಪಲ್ನ ಈ ಹಿಂದಿನ ಐಫೋನ್ಗಳಿಗೆ ಹೋಲಿಕೆ ಮಾಡಿದರೆ ಹೊಸ ಫೋನಿನ ಬೆಲೆ ಕಡಿಮೆಯಿದೆ.

ಗುಣ ವೈಶಿಷ್ಟ್ಯಗಳು
ಸಿಂಗಲ್ ನ್ಯಾನೋ ಸಿಮ್
4 ಇಂಚಿನ ಎಲ್ಇಡಿ ಬ್ಯಾಕ್ಲಿಟ್ ಐಪಿಎಸ್ ಎಲ್ಸಿಡಿ ಕ್ಯಾಪಸಿಟೆಟಿವ್ ಟಚ್ಸ್ಕ್ರೀನ್(640* 1136 ಪಿಕ್ಸೆಲ್, 326 ಪಪಿಐ)
ಐಓಎಸ್ 9.3 ಆಪರೇಟಿಂಗ್ ಸಿಸ್ಟಂ
1.84 GHz ಟ್ವಿಸ್ಟರ್ ಡ್ಯುಯಲ್ ಕೋರ್ ಪ್ರೊಸೆಸರ್
ಪವರ್ವಿಆರ್ ಜಿಟಿ7600( ಸಿಕ್ಸ್ ಕೋರ್) ಗ್ರಾಫಿಕ್ಸ್ ಪ್ರೊಸೆಸರ್
16/64 ಜಿಬಿ ಆಂತರಿಕ ಮೆಮೊರಿ
12 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚುವರಿ ಮೆಮೊರಿ ವಿಸ್ತರಣೆ ಮಾಡಲು ಕಾರ್ಡ್ ಸ್ಲಾಟ್ ಇಲ್ಲ
ಫಿಂಗರ್ ಪ್ರಿಂಟ್, ಎಕ್ಸಲರೋಮಿಟರ್, ಗೈರೋ, ಪ್ರಾಕ್ಸಿಮಿಟಿ, ಕಂಪಾಸ್ ಸೆನ್ಸರ್
ಲಿಪೊ 1642 mAh ಬ್ಯಾಟರಿ

Write A Comment