ರಾಷ್ಟ್ರೀಯ

ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿ ಸೆಕ್ಸಿ ನೃತ್ಯ ಮಾಡಿದ ಪಾಕ್ ಮಾಡೆಲ್ ಕಂದೀಲ್

Pinterest LinkedIn Tumblr

pak

ನವದೆಹಲಿ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದರೆ ತಾನು ನಗ್ನ ನೃತ್ಯ ಮಾಡುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದ ಪಾಕಿಸ್ತಾನದ ಮಾಡೆಲ್ ಕಂದೀಲ್ ಬಲೋಚ್ ಇದೀಗ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿ ವೀಡಿಯೋ ಶೇರ್ ಮಾಡಿದ್ದಾಳೆ.

ಶಾಹೀದ್ ಅಫ್ರೀದಿಯ ದೊಡ್ಡ ಅಭಿಮಾನಿಯಾಗಿರುವ ಕಂದೀಲ್, ಈ ಬಾರಿ ಪಾಕಿಸ್ತಾನ ಭಾರತನ್ನು ಸೋಲಿಸುವುದು ಪಕ್ಕಾ ಎಂದು ಹೇಳಿದ್ದಳು. ಒಂದು ವೇಳೆ ಪಾಕಿಸ್ತಾನ ಗೆದ್ದರೆ ತಾವು ನಗ್ನ ನೃತ್ಯ ಮಾಡುವುದಾಗಿ ಹೇಳಿಕೆ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಅದೇ ವೇಳೆ ಮ್ಯಾಚ್ ಆರಂಭವಾಗುವ ಮುನ್ನ 20 ಸೆಕೆಂಡ್ಗಳ ವೀಡಿಯೋ ಒಂದನ್ನು ಆಕೆ ಪೋಸ್ಟ್ ಮಾಡಿ ಇದು ಟ್ರೈಲರ್ ಎಂದು ಹೇಳಿದ್ದಳು.

ಆದಾಗ್ಯೂ, ಭಾರತ ಪಾಕಿಸ್ತಾನವನ್ನು ಪರಾಭವಗೊಳಿಸಿದಾಗ ಕಂದೀಲ್ ಸಿಕ್ಕಾಪಟ್ಟೆ ಅತ್ತು, ಅಫ್ರೀದಿಯನ್ನು ಬೈಯುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಳು. ಆಕೆ ಅತ್ತುಕೊಂಡು ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಬೆದರಿಕೆ ನೀಡುತ್ತಿರುವ ವೀಡಿಯೋ ಕೂಡಾ ವೈರಲ್ ಆಗಿತ್ತು.

ಇಷ್ಟಕ್ಕೆ ಸುಮ್ಮನಾಗದ ಮಾಡೆಲ್, ಮತ್ತೊಮ್ಮೆ ಜನರ ಗಮನ ಸೆಳೆಯುವುದಕ್ಕಾಗಿ ಒಂದಷ್ಟು ಸೆಕ್ಸಿ ಡ್ಯಾನ್ಸ್ ಸ್ಟೆಪ್ಗಳನ್ನು ಹಾಕಿ ಅದನ್ನು ಭಾರತದ ಕ್ರಿಕೆಟ್ ಟೀಂಗೆ ಡೆಡಿಕೇಟ್ ಮಾಡಿದ್ದಾಳೆ. ಇದರ ಬೆನ್ನಲ್ಲೇ ಬಾಲಿವುಡ್ ಹಾಡೊಂದಕ್ಕೆ ಸ್ಟೆಪ್ ಹಾಕಿ ಅದನ್ನೂ ಭಾರತೀಯರಿಗೆ ಸಮರ್ಪಿಸಿದ್ದಾಳೆ.

Write A Comment