ಕರ್ನಾಟಕ

ದಂಡುಪಾಳ್ಯ-2: ಮಾರ್ಚ್ 24 ರಿಂದ ಚಿತ್ರೀಕರಣ ಪ್ರಾರಂಭ

Pinterest LinkedIn Tumblr

dandu

ಬೆಂಗಳೂರು: ‘ದಂಡುಪಾಳ್ಯ’ ಸಿನೆಮಾದ ಮುಂದಿನ ಭಾಗವನ್ನು ನಿರ್ದೇಶಿಸುತ್ತಿರುವ ನಿರ್ದೇಶಕ ಶ್ರೀನಿವಾಸ ರಾಜು, ಇದು ಕಮರ್ಷಿಯಲ್ ಗಳಿಕೆಗಾಗಿ ಮಾಡುತ್ತಿರುವುದಲ್ಲ ಬದಲಾಗಿ ಇನ್ನೂ ಹೇಳುವುದು ಸಾಕಷ್ಟಿದೆ ಎಂದಿದ್ದಾರೆ.

“ದಂಡುಪಾಳ್ಯದಲ್ಲಿ ಜನಕ್ಕೆ ತಿಳಿಯಬೇಕಿರುವುದು ಇನ್ನೂ ಸಾಕಷ್ಟಿದೆ. ಇದರ ಎರಡನೆ ಭಾಗ ಮಾಡಿದ ಮೇಲೂ ಬೇರೆ ವಿಷಯದ ಸಿನೆಮಾ ಮಾಡುವುದನ್ನು ಚಿಂತಿಸಲು ನನಗೆ ಕಷ್ಟ. ನಾನು ಸಾಕಷ್ಟು ನೋವು ಕಂಡಿದ್ದೇನೆ” ಎಂದು ವಿವರಿಸುತ್ತಾರೆ ನಿರ್ದೇಶಕ.

“ಅಪರಾಧಿ ಸಿನೆಮಾಗಳನ್ನು ಹೊರತುಪಡಿಸಿದರೆ, ಎಲ್ಲವನ್ನೂ ಖುಷಿಯಾಗಿ ನೋಡಬಹುದು. ಆದರೆ ಜೀವನದ ಈ ಆಯಾಮವೂ ತಿಳಿದಿರುವ ಅವಶ್ಯಕತೆ ಇದೆ. ಕ್ರೈಮ್ ಮೂಲಕ ಯಾವ ಸಂದೇಶವನ್ನು ನೀಡಲಾಗುವುದಿಲ್ಲ, ಆದುದರಿಂದ ಜನ ಇವುಗಳನ್ನು ನೋಡಿ ಮರೆತುಬಿಡಬೇಕು” ಎನ್ನುತ್ತಾರೆ ಶ್ರೀನಿವಾಸ್.

ಮಾರ್ಚ್ ೨೪ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಸಿನೆಮಾದ ಮೊದಲ ನೋಟದ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ “ಮೊದಲನೇ ಭಾಗ ಬಹಳ ಸರಳವಾಗಿತ್ತು. ನಿಜವಾದ ಕಥೆ ಇರುವುದು ಎರಡನೇ ಭಾಗದಲ್ಲಿಯೇ. ಮೊದಲನೇ ಭಾಗದಲ್ಲಿ ಶೇಕಡಾ ೨೦ ಇತ್ತಷ್ಟೇ, ಉಳಿದದ್ದೆಲ್ಲವೂ ಮುಂದುವರೆದ ಭಾಗದಲ್ಲಿರುತ್ತದೆ” ಎನ್ನುತ್ತಾರೆ.

ತಮ್ಮನ್ನು ತಾವು ಕ್ರೈಮ್ ಸಿನೆಮಾಗಳ ನಿರ್ದೇಶಕ ಎಂದು ಕರೆದುಕೊಳ್ಳಲು ಬಯಸದ ಶ್ರೀನಿವಾಸ್ “ನಾನು ‘ಶಿವಂ’, ‘ಪುಟ್ಟಣ್ಣ’ನಂತಹ ಸಿನೆಮಾಗಳನ್ನು ಮಾಡಿದ್ದೇನೆ. ‘ದಂಡುಪಾಳ್ಯ’ದಂತಹ ಸಿನೆಮಾವನ್ನು ಮಾಡಬಲ್ಲೆ. ಇದನ್ನು ಒಂದೊಳ್ಳೆ ಸಿನೆಮಾವಾಗಿ ನೋಡಬೇಕು” ಎನ್ನುತ್ತಾರೆ.

ಹಿಂದಿನ ಸಿನೆಮಾದ ಬಹುತೇಕ ತಾರಾಗಣವನ್ನು ಎರಡನೆ ಭಾಗಕ್ಕೂ ಉಳಿಸಿಕೊಂಡಿದ್ದಾರೆ ನಿರ್ದೇಶಕ. ಪೂಜಾ ಗಾಂಧಿ, ಮಕರಂದ ದೇಶಪಾಂಡೆ, ಕರಿ ಸುಬ್ಬು, ರವಿ ಕಾಳೆ, ಯತಿರಾಜ್, ಜಯದೇವ್ ಮಹಾದೇವನ್ ಈ ಭಾಗದಲ್ಲೂ ಮುದುವರೆಯಲಿದ್ದು ಹೊಸ ನಟರು ಸೇರಿಕೊಳ್ಳಲಿದ್ದಾರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ವೆಂಕಟೇಶ್ ಪ್ರಸಾದ್ ಸಿನೆಮ್ಯಾಟೋಗ್ರಾಫರ್.

Write A Comment