ಕರ್ನಾಟಕ

ಎಂಜಿನಿಯರ್ ಬಂಧನ ವಿರೋಧಿಸಿ ಪ್ರತಿಭಟನೆ: 4 ರೈಲು ಸಂಚಾರ ವ್ಯತ್ಯಯ

Pinterest LinkedIn Tumblr

8xncynz5ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದ ಪಾರ್ಸೆಲ್‌ ವಿಭಾಗದ ಕಟ್ಟಡ ಕುಸಿತ ಪ್ರಕರಣ ಸಂಬಂಧ ರೈಲ್ವೆ ಇಲಾಖೆಯ ವಿಭಾಗೀಯ ಸಹಾಯಕ ಎಂಜಿನಿಯರ್ ಬಂಧನ ವಿರೋಧಿಸಿ ಅಧಿಕಾರಿಗಳು ಮತ್ತು ನೌಕರರು ಇಲ್ಲಿನ ರೈಲುನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಲ್ಕು ರೈಲುಗಳ ಸಂಚಾರ ವ್ಯತ್ಯಯವಾಗಿದೆ. ಪ್ರತಿಭಟನೆಯಿಂದ ಬೇಸತ್ತ ಪ್ರಯಾಣಿಕರು ರೈಲಿನಿಂದ ಇಳಿದು ಪ್ರತಿಭಟನೆ ನಡೆಸಿದರು.
ಎಂಜಿನಿಯರ್ ಬಂಧನ ವಿರೋಧಿಸಿ ಪ್ರತಿಭಟನೆ ಮುಂದುವರೆದಿದ್ದು, ಜೋಧ್ ಪುರ-ಬೆಂಗಳೂರು ರೈಲು ಸೇರಿದಂತೆ ನಾಲ್ಕು ರೈಲುಗಳ ಸಂಚಾರ ವಿಳಂಬವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಅಧಿಕಾರಿ, ನೌಕರರ ಪ್ರತಿಭಟನೆಯಿಂದ ಬೇಸತ್ತ ಪ್ರಯಾಣಿಕರು ರೈಲಿನಿಂದ ಇಳಿದು ಪ್ರತಿಭಟನೆ ನಡೆಸಿದರು. ಜೋಧ್ ಪುರ- ಬೆಂಗಳೂರು ರೈಲು ಸಂಚಾರ ಮುಂದುವರಿಕೆ. ಎರಡು ತಾಸು ವಿಳಂಬ ವಿಳಂಬವಾಗಿದೆ.
ಪ್ರಕರಣ ಸಂಬಂಧ ನೈರುತ್ಯ ರೈಲ್ವೆಯ ಸಹಾಯಕ ಎಂಜಿನಿಯರ್ ರವೀಂದ್ರ ಬಿರಾದಾರ್ ಅವರನ್ನು ರೈಲ್ವೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಫೆಬ್ರವರಿ 8ರಂದು ರೈಲ್ವೆ ಇಲಾಖೆ ಪರ್ಸೆಲ್ ಕಟ್ಟಡ ಕುಸಿದು ಏಳು ಜನ ಮೃತಪಟ್ಟಿದ್ದರು. 15 ಜನ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

Write A Comment