ರಾಷ್ಟ್ರೀಯ

ಎರಡಂಕಿ ಅಭಿವೃದ್ಧಿ ದರ ತಲುಪುವುದು ಕಷ್ಟ: ಜೇಟ್ಲಿ

Pinterest LinkedIn Tumblr

Jaitleyನವದೆಹಲಿ(ಪಿಟಿಐ): ಪ್ರಸಕ್ತ ಜಾಗತಿಕ ಸನ್ನಿವೇಶದಲ್ಲಿ ‘ಎರಡಂಕಿ ಅಭಿವೃದ್ಧಿ ದರ ದಾಖಲಿಸುವುದು ವಿಪರೀತ ಕಷ್ಟ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಪ್ರತಿಪಾದಿಸಿದ್ದಾರೆ.
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ‘ಈ ಜಾಗತಿಕ ಸನ್ನಿವೇಶದಲ್ಲಿ ಅಭಿವೃದ್ಧಿ ದರವು ಎರಡಂಕಿ ಸಮೀಪಕ್ಕೆ ತಲುಪುತ್ತದೆ ಎಂದು ನಾನು ಹೇಳುವುದಿಲ್ಲ. ಅದನ್ನು ಸಾಧಿಸುವುದು ವಿಪರೀತ ಕಷ್ಟ, ಕಾರ್ಯತಃ ಅಸಾಧ್ಯ’ ಎಂದು ನುಡಿದರು.
ಅದಕ್ಕೆ ಹಲವು ಉದಾಹರಣೆಗಳನ್ನು ನೀಡಿದ ಜೇಟ್ಲಿ, ದೇಶವು ಉನ್ನತ ಪ್ರಗತಿ ಹಾಗೂ ಸುಧಾರಣೆಯ ಗುರಿ ಇಟ್ಟುಕೊಳ್ಳಬಹುದು ಎಂದರು.
‘ಉದಾಹರಣೆಗೆ, ನನೆಗುದಿಗೆ ಬಿದ್ದಿರುವ ಕೆಲವು ಸುಧಾರಣೆಗಳನ್ನು ಕೈಗೊಂಡರೆ, ಉತ್ಪಾದನೆ, ಹೂಡಿಕೆ ಹಾಗೂ ಕೃಷಿಯಂಥ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದರೆ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸಿದಲ್ಲಿ, ಅವು ಅಭಿವೃದ್ಧಿಗೆ ಕೊಡುಗೆ ನೀಡಬಲ್ಲವು. ಖಾಸಗಿ ಕ್ಷೇತ್ರವಂತೂ ಹೂಡಕೆ ಕೇಂದ್ರೀತವಾಗಿದೆ.
‘ಅಭಿವೃದ್ಧಿ ದರ ಎರಡಂಕಿಯ ಸಮೀಪಕ್ಕೆ ತಲುಪುವುದು ಸಾಧ್ಯ ಆಗದಿರಬಹುದು. ಆದರೆ, ಈ ಎಲ್ಲ ಕ್ರಮಗಳಿಂದ ಆರ್ಥಿಕ ಚಟುವಟಿಕೆಯ ದೃಷ್ಟಿಕೋನಕ್ಕೆ ವೇಗ ದೊರೆಯಬಲ್ಲದು. ಪ್ರಸಕ್ತ ಪ್ರಗತಿ ದರಕ್ಕಿಂತಲೂ ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು. ಜಾಗತಿಕ ವ್ಯತಿರಿಕ್ತ ಸನ್ನಿವೇಶದಲ್ಲೂ ಅಭಿವೃದ್ಧಿ ದರ ಸುಧಾರಿಸುವುದು ಗುರಿ’ ಎಂದಿದ್ದಾರೆ.
ಜಾಗತಿಕ ಪ್ರಗತಿಗೆ ತುಲನೆ ಮಾಡಿದರೆ ಪ್ರಸಕ್ತ 7–7.5ರಷ್ಟು ಅಭಿವೃದ್ದಿ ದರವು ‘ಪರಿಣಾಮಕಾರಿ’ಯೇ ಎಂದು ಅವರು ಅಭಿಪ್ರಾಯಪಟ್ಟರು.

Write A Comment