ಕರ್ನಾಟಕ

ಲಗುಬಗೆಯಿಂದ ೫ ಪಾಠ ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ

Pinterest LinkedIn Tumblr

sಬಾದಾಮಿ, ಮಾ ೧೬- ಒಂದೇ ದಿನ ವಿಜ್ಞಾನದ ೫ ಪಾಠಗಳನ್ನು ಲಗುಬಗೆಯಿಂದ ಭೋದಿಸಿದ ವಿಜ್ಞಾನ ಶಿಕ್ಷಕಿಯೋರ್ವರ ಕಾಯಕವನ್ನು ಖಂಡಿಸಿ ಇಲ್ಲಿನ ರಾಣಿಚೆನ್ನಮ್ಮಾ ವಸತಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬಹಿಷ್ಕರಿಸಿ ಶಾಲೆ ಮುಂದೆ ಧರಣಿ ನಡೆಸಿದರು.
ರಾಣಿಚೆನ್ನಮ್ಮ ವಸತಿ ಶಾಲೆಯ ಶಿಕ್ಷಕಿ ಆರ್.ಎಸ್. ಕಲಹಾಳ ಒಂದೇ ದಿನ ೯ನೇ ತರಗತಿ ವಿದ್ಯಾರ್ಥಿಗಳಿಗೆ ೫ ಪಾಠಗಳನ್ನು ಭೋದಿಸಿ ಸಿಲೆಬಸ್ ಮುಗಿಸಿದ್ದರೆನ್ನಲಾಗಿದೆ.
ಆದ್ದರಿಂದ ಶಿಕ್ಷಕಿ ಕಲಿಸಿದ್ದು ನಮಗೆ ತಿಳಿದಿಲ್ಲ, ಮೇಲಾಗಿ ಅವರು ಕಲಿಸಿದ್ದು ಅವರಿಗೇ ತಿಳಿದಿಲ್ಲವೆಂದು ಆಪಾದಿಸಿ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಸೇರಿ ಶಾಲೆ ಮುಂದೆ ಧರಣಿ ನಡೆಸಿ ಪರೀಕ್ಷೆ ಬಹಿಷ್ಕರಿಸಿದರು.
ಅಲ್ಲದೆ ಮೇಲಾಧಿಕಾರಿ ಬಂದು ಈ ಶಿಕ್ಷಕಿಯನ್ನು ವರ್ಗಾವಣೆ ಮಾಡು
ವವರೆಗೂ ಧರಣಿ ನಿಲ್ಲಿಸುವದಿಲ್ಲವೆಂದು ಎಚ್ಚರಿಕೆ ನೀಡಿದರು. ಏತನ್ಮಧ್ಯೆ ಶಿಕ್ಷಕಿ ಕಲಹಾಳ ಅವರು ನಾನು ಪರೀಕ್ಷಾ ಪೇಪರ್ ವ್ಯಾಲುವೇಶನ್, ಟ್ರೇನಿಂಗ್ ಅದು ಇದು ಅಂತಾ ಹೋಗಿದ್ದೆ. ಆದ್ದರಿಂದ ಈ ರೀತಿ ಆಗಿದೆ. ನನ್ನದು ತಪ್ಪು ಆಗಿದೆ ಮುಂದೆ ಈ ರೀತಿ ಆಗೋಲ್ಲ ಎಂದು ಹೇಳಿದರು.
ಪಾಲಕರು ಧರಣಿ ಹಿಂದಕ್ಕೆ
ಪಡೆಯದೆ ಪಟ್ಟು ಹಿಡಿದು ಮುಂದುವರೆಸಿದರು. ಪಾಲಕರಾದ ಅಶೋಕ ದೇಸಾಯಿ, ಎಸ್.ಎಸ್. ಮುದೇನಗುಡಿ, ಎಂ.ಎಸ್. ತಳವಾರ, ಎಂ.ಡಿ. ಕಟ್ಟಿಮನಿ, ಪಿ.ಎಸ್. ಅರಿಷಿನಗೋಡಿ ಸೇರಿದಂತೆ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.

Write A Comment