ಕರ್ನಾಟಕ

ನ್ಯಾಯಕ್ಕಾಗಿ ಡಿ.ಕೆ ರವಿ ಕುಟುಂಬಸ್ಥರ ಪಾದಯಾತ್ರೆ

Pinterest LinkedIn Tumblr

ravi

ತುಮಕೂರು: ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ನಿಗೂಢವಾಗಿ ಸಾವನ್ನಪ್ಪಿ ಇಂದಿಗೆ ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ನ್ಯಾಯಕ್ಕಾಗಿ ಆಗ್ರಹಿಸಿ ರವಿ ಕುಟುಂಬಸ್ಥರು ಇಂದು ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ತುಮಕೂರಿನ ದೊಡ್ಡಕೊಪ್ಪಲಿನ ರವಿ ಅವರ ಸಮಾಧಿಯಿಂದ ಪಾದಯಾತ್ರೆ ಆರಂಭವಾಗಿದ್ದು ರವಿ ತಾಯಿ ಗೌರಮ್ಮ, ತಂದೆ ಕರಿಯಪ್ಪ ಹಾಗೂ ರೈತ ಸಂಘಟನೆ, ಜಯಕರ್ನಾಟಕ ಸಂಘಟನೆಯ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ದೊಡ್ಡಕೊಪ್ಪಲಿನಿಂದ ಹುಲಿಯೂರು ದುರ್ಗಕ್ಕೆ ಪಾದಯಾತ್ರೆ ನಡೆಸಿದ ರವಿ ಕುಟುಂಬಸ್ಥರು, ಹುಲಿಯೂರು ದುರ್ಗದಿಂದ ಕಾರಿನ ಮೂಲಕ ಬೆಂಗಳೂರಿಗೆ ಬಂದು ಮೌರ್ಯ ಹೋಟೆಲ್‌ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ.

ಮೊದಲ ಪುಣ್ಯ ತಿಥಿ:
ಹುಟ್ಟೂರಾದ ದೊಡ್ಡ ಕೊಪ್ಪಲಿನಲ್ಲಿ ನಡೆದ ಮೊದಲ ವರ್ಷದ ಪುಣ್ಯತಿಥಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿದರು. ರವಿ ಅವರ ತಾಯಿಯ ಅಳಲು ಮುಗಿಲು ಮುಟ್ಟಿತ್ತು.

ಆತ್ಮಕ್ಕೆ ಶಾಂತಿ ಸಿಗಲಿ:
ನಾನು ಎಲ್ಲಿಗೂ ಹೋಗಿಲ್ಲ, ಮನೆಯಲ್ಲಿಯೇ ಇದ್ದೇನೆ. ಅಳಿಯ ಸಾವಿನ ಸತ್ಯ ಒಂದಲ್ಲಾ ಒಂದು ದಿನ ಹೊರಗಡೆ ಬರುತ್ತದೆ.ಆಗ ಸತ್ಯ ಏನೆಂದು ಜನರಿಗೆ ತಿಳಿಯಲಿದೆ ಅಳಿಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾವ ಹನುಮಂತರಾಯಪ್ಪ ಹೇಳಿದ್ದಾರೆ.

Write A Comment