ರಾಷ್ಟ್ರೀಯ

ಏರಿಕೆಯಾಗಲಿರುವ ವಾಹನ ವಿಮೆ ಕಂತು; ಏಪ್ರಿಲ್ ನಿಂದ ಹೊಸ ದರಗಳು ಜಾರಿಗೆ

Pinterest LinkedIn Tumblr

Best-Car-Insurance

ನವದೆಹಲಿ: ಹಣಕಾಸು ವರ್ಷ 2016 ಆರಂಭವಾಗುತ್ತಿದ್ದಂತೆಯೇ ವಾಹನ ವಿಮೆಯಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಮೂರನೆ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕಾಗಿರುವುದರಿಂದ ಎಲ್ಲ ವಾಹನಗಳ ವಿಮಾ ಪ್ರೀಮಿಯಂಗಳಲ್ಲಿ ಏರಿಕೆ ಕಾಣಲಿದೆ.

ಸಾವಿರ ಸಿಸಿವರೆಗಿನ ಸಾಮರ್ಥ್ಯದ ಎಂಜಿನ್ ಹೊಂದಿರುವ ಕಾರುಗಳ ವಿಮಾ ಕಂತಿನ ಮೊತ್ತದಲ್ಲಿ ಶೇಕಡಾ 30ರವರೆಗೆ ಏರಿಕೆ ಕಂಡರೆ, ಸಾವಿರ ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಕಾರುಗಳಿಗೆ ಶೇಕಡಾ 25ರವರೆಗೂ ಏರಲಿದೆ. ದ್ವಿಚಕ್ರ ವಾಹನಕ್ಕೆ ಈ ಏರಿಕೆ ಪ್ರಮಾಣ ಶೇಕಡಾ 10ರಿಂದ 25 ಮತ್ತು ವಾಣಿಜ್ಯ ವಾಹನಗಳಿಗೆ ಶೇಕಡಾ 15ರಿಂದ 30ರಷ್ಟು ಇರಲಿದೆ.

ಹಣದುಬ್ಬರಕ್ಕೆ ಅನುಗುಣವಾಗಿ ವಿಮಾ ಕಂತನ್ನು ಪರಿಷ್ಕರಿಸಬೇಕೆಂದು ನಿರ್ಧರಿಸಿದ ನಂತರ ಇದು ಆರನೇ ಬಾರಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ದರ ಹೆಚ್ಚಿಸುತ್ತಿದೆ. ವಿಮಾ ಕ್ಷೇತ್ರದಲ್ಲಿ ಜೀವ ವಿಮೆ ನಂತರ ವಾಹನ ವಿಮೆ ಎರಡನೇ ಸ್ಥಾನದಲ್ಲಿದೆ. ವಾಹನ ವಿಮೆಯಲ್ಲಿ ಸ್ವಯಂ ಡ್ಯಾಮೇಜ್ ಮತ್ತು ಮೂರನೇ ಪಾರ್ಟಿ ಡ್ಯಾಮೇಜು ಹೊಂದಿದೆ.

Write A Comment