ಕರ್ನಾಟಕ

ಕೊಡವ ಸಂಪ್ರದಾಯದಂತೆ ಸಪ್ತಪದಿ ತುಳಿದ ಕ್ರಿಕೆಟಿಗ ರಾಬಿನ್ ಉತ್ತಪ್ಪ

Pinterest LinkedIn Tumblr

robin-sheethal

ಮಡಿಕೇರಿ: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಗೃಹಾಸ್ಥಾಶ್ರಮಕ್ಕೆ ಕಾಲಿಟ್ಟ ರಾಬಿನ್ ಉತ್ತಪ್ಪ ತಂದೆ ವೇಣು ಉತ್ತಪ್ಪರ ಆಸೆಯಂತೆ ಕೊಡವ ಶೈಲಿಯಲ್ಲಿ ಶೀತಲ್ ಗೌತಮ್​ರನ್ನು ವರಿಸಿದ್ದಾರೆ.

ಕೊಡಗಿನ ಸಾಂಪ್ರದಾಯಿಕ ಕುಪ್ಪೆಚಾಲೆಯಲ್ಲಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತೊಂದೆಡೆ ಕೊಡವ ಸೀರೆಯನ್ನುಟ್ಟು ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಶೀತಲ್ ಗೌತಮ್ ಕಂಗೊಳಿಸುತ್ತಿದ್ದರು. ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಹೋಟೆಲ್​​​​ನಲ್ಲಿ ವಿವಾಹ ಸಂಭ್ರಮ ಕಳೆ ಕಟ್ಟಿತ್ತು. ಮದುವೆಗೆ ಕೆಲವು ಕ್ರಿಕೆಟಿಗರು, ಆತ್ಮೀಯ ಸ್ನೇಹಿತರು, ಬಂಧುಗಳು ಭಾಗವಹಿಸಿ ನೂತನ ವಧು-ವರರಿಗೆ ಆಶೀರ್ವದಿಸಿದರು.

ಕೊಡಗಿನ ಸ್ಥಳಿಯ ಖಾದ್ಯಗಳಾದ ನೂಪುಟ್ಟು, ಅಪ್ಪಂ, ಕೋಳಿ ಸಾರು, ಪಂದಿ ಕರಿ.. ಹೀಗೆ ನಾನಾ ಖಾದ್ಯಗಳ ಔತಣ ಏರ್ಪಡಿಸಲಾಗಿತ್ತು.

Write A Comment