ಕರ್ನಾಟಕ

ಕುತೂಹಲಕ್ಕೆ ಕಾರಣವಾದ ಅಂಬರೀಶ್ ಮನೆಗೆ ಪೂಜಾಗಾಂಧಿ ಭೇಟಿ !

Pinterest LinkedIn Tumblr

pooja-gandhi

ಬೆಂಗಳೂರು: ನಟ ದರ್ಶನ್-ವಿಜಯಲಕ್ಷ್ಮೀ ದಾಂಪತ್ಯದಲ್ಲಿನ ವಿರಸ ಕ್ಷಣಕ್ಕೊಂದು ವಿದ್ಯಾಮಾನದೊಂದಿಗೆ ಸಾಗುತ್ತಿದೆ. ಈ ಮಧ್ಯೆ ಅಂಬರೀಷ್ ನಿವಾಸಕ್ಕೆ ನಟಿ ಪೂಜಾಗಾಂಧಿ ಭೇಟಿ ನೀಡಿದ್ದರು.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಅಂಬರೀಷ್ ನಿವಾಸಕ್ಕೆ ಪೂಜಾ ಗಾಂಧಿ ಭೇಟಿ ನೀಡಿಸ್ದ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ವಿಜಯಲಕ್ಷ್ಮಿ ವಾಸವಿರುವ ಪ್ರೆಸ್ಟೀಜ್ ಅಪಾರ್ಟ್‍ಮೆಂಟ್‍ನಲ್ಲೇ ನಟಿ ಪೂಜಾ ಗಾಂಧಿ ಸಹ ವಾಸವಿದ್ದಾರೆ. ಹಾಗಾಗಿ ಅಂಬರೀಷ್ ಭೇಟಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಈ ವೇಳೆ ಮಾತನಾಡಿದ ನಟಿ ಪೂಜಾಗಾಂಧಿ, ನಾನು ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್‍ಮೆಂಟ್‍ನಲ್ಲೇ ಇದ್ದೇನೆ. ವಿಜಯಲಕ್ಷ್ಮಿ ಅವರಿಗೆ ನಾನು ಆಲ್ ದಿ ಬೆಸ್ಟ್ ಹೇಳಿದ್ದೇನೆ. ಅವರ ವೈಯಕ್ತಿಕ ಜೀವನ ಆಗಿರುವುದರಿಂದ ನಾನೇನು ಮಾತನಾಡುವುದಿಲ್ಲ. ಈ ಪ್ರಕರಣ ಸುಖಾಂತ್ಯ ಕಾಣಲಿ ಎಂದು ಕೋರುತ್ತೇನೆ ಎಂದಷ್ಟೇ ತಿಳಿಸಿದರು.

Write A Comment