ರಾಷ್ಟ್ರೀಯ

ನಿತಿಶ್ ಕುಮಾರ್ ಹೊಗಳಿ, ಕಾಂಗ್ರೆಸ್ ನ್ನು ತೆಗಳಿದ ಮೋದಿ

Pinterest LinkedIn Tumblr

modi-nithish

ಹಜಿಪುರ: ಬಿಹಾರದಲ್ಲಿ ಹಜಿಪುರದಲ್ಲಿ ನಿರ್ಮಾಣವಾಗಿರುವ ನೂತನ ದಿಘಾ-ಸೋನೆಪುರ್ ರೈಲ್ ಹಾಗೂ ರಸ್ತೆ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನ್ನು ತರಾಟೆಗೆ ತೆಗೆದುಕೊಂಡು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಗಳಿದ್ದಾರೆ.

ನಿತೀಶ್ ಕುಮಾರ್ ಅವರು ಎನ್ ಡಿಎ ಮೈತ್ರಿಕೂಟದಲ್ಲಿದ್ದ ದಿನಗಳನ್ನು ಮೆಲುಕು ಹಾಕಿರುವ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಬಿಹಾರದ ಅಭಿವೃದ್ಧಿಯನ್ನು ಕಡೆಗಣಿಸಿತ್ತು ಎಂದು ಆರೋಪಿಸಿದ್ದಾರೆ.

ದಿಘಾ-ಸೋನೆಪುರ್ ರೈಲ್ ಹಾಗೂ ರಸ್ತೆ ಸೇತುವೆ ಯೋಜನೆ ನಿತೀಶ್ ಕುಮಾರ್ ಎನ್ ಡಿಎ ಸರ್ಕಾರದಲ್ಲಿ ರೈಲು ಸಚಿವರಾಗಿರಬೇಕಾದರೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿತ್ತು. ಆ ಯೋಜನೆ ಇಂದು ಪೂರ್ಣಗೊಂಡಿದೆ ಎಂದು ಮೋದಿ ಹೇಳಿದ್ದಾರೆ.

ಈ ಯೋಜನೆಯನ್ನು 6 -7 ವರ್ಷಗಳಲ್ಲೇ ಪೂರ್ಣಗೊಳಿಸಬಹುದಾಗಿತ್ತು, ಆದರೆ ಕಳೆದ 10 ವರ್ಷಗಳಲ್ಲಿ ಇದನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಪರೋಕ್ಷವಾಗಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯೋಜನೆಯನ್ನು ನಿಗದಿತ ವೇಳೆಯಲ್ಲೇ ಪೂರ್ಣಗೊಳಿಸಿದಿದ್ದರೆ 600 ಕೋಟಿಯಲ್ಲಿ ಮುಗಿಸಬಹುದಿತ್ತು, ಆದರೆ ವಿಳಂಬವಾದ್ದರಿಂದ 3 ,000 ಕೋಟಿಯಷ್ಟಾಗಿದೆ. ಇಂತಹ ಯೋಜನೆಗಳಿಗೆ ಬಳಕೆಯಾಗುವುದು ಜನರ ಹಣ, ಆದರೆ ನಮ್ಮ ದೇಶದಲ್ಲಿ ಅಭಿವೃದ್ಧಿ ಕೆಲಸಗಳು ಒಂದಲ್ಲಾ ಒಂದು ಕಾರಣಕ್ಕಾಗಿ ವಿಳಂಬವಾಗುತ್ತದೆ ಎಂದು ಮೋದಿ ಹೇಳಿದರು.

Write A Comment