ಕರ್ನಾಟಕ

ಸೆಮಿಫೈನಲ್ ಮೊದಲ ಗುರಿ; ಭಾರತ ತಂಡದ ನಾಯಕಿ ಮಿಥಾಲಿ ಹೇಳಿಕೆ

Pinterest LinkedIn Tumblr

womens20

ಬೆಂಗಳೂರು : ‘ಮಹಿಳೆಯರ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸುವುದು ನಮ್ಮ ಮೊದಲ ಗುರಿಯಾಗಿದೆ’ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ಐರ್ಲೆಂಡ್ ಎದುರು ವಿಶ್ವ ಟ್ವೆಂಟಿ–20 ಟೂರ್ನಿಯ ಮೊದಲ ಅರ್ಹತಾ ಸುತ್ತಿನ ಪಂದ್ಯ ಆಡಲಿರುವ ಮುನ್ನಾ ದಿನ ಬುಧವಾರ ಮಿಥಾಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

‘ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಎದುರು ಸರಣಿ ಗೆದ್ದ ಬಳಿಕ ಭಾರತ ತಂಡ ವಿಶ್ವ ಟ್ವೆಂಟಿ–20ಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೆಚ್ಚಿಸಿ ಕೊಂಡಿದೆ’ ಎಂದು ಅವರು ಹೇಳಿದ್ದಾರೆ.

‘ನಮ್ಮ ತಂಡ ಸತತವಾಗಿ ಪಂದ್ಯ ಗಳನ್ನು ಗೆದ್ದುಕೊಂಡಿ ರುವುದರಿಂದ ಫಾರ್ಮ್ನಲ್ಲಿದೆ. ಆದ್ದರಿಂದ ಖಂಡಿತ ವಾಗಿಯೂ ಸೆಮಿಫೈನಲ್ ಹಂತದಲ್ಲಿ ಆಡಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತಕ್ಕೆ ಕಠಿಣ ಎದುರಾಳಿ ಯಾರು?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಇತ್ತೀಚೆಗೆ ನಮ್ಮ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ವಿಶ್ವಕಪ್ನಲ್ಲಿ ನಮಗೆ ಕಠಿಣ ಎದುರಾಳಿ’ ಎಂದು ಹೇಳಿದ್ದಾರೆ.

‘ನಾವು ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿ ಗೆದ್ದುಕೊಂಡಿದ್ದೇವೆ. ಆದರೂ ಈ ತಂಡ ನಮಗೆ ಉತ್ತಮ ಪೈಪೋಟಿ ನೀಡುವ ಗುಣ ಹೊಂದಿದೆ’ ಎಂದು ಮಿಥಾಲಿ ಅಭಿಪ್ರಾಯಪಟ್ಟರು.

ಇದೇ ಪ್ರಶ್ನೆಗೆ ಉತ್ತರಿಸಿದ ಶ್ರೀಲಂಕಾ ತಂಡದ ನಾಯಕಿ ಶಶಿಕಲಾ ಶ್ರೀವರ್ಧನೆ ‘ಇತ್ತೀಚೆಗೆ ಅತ್ಯುತ್ತಮ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯಾ ನಮ್ಮ ತಂಡಕ್ಕೆ ಕಠಿಣ ಸವಾಲು ಒಡ್ಡುವ ಸಾಧ್ಯತೆ ಇದೆ’ ಎಂದರು.

ಐರ್ಲೆಂಡ್ ತಂಡದ ನಾಯಕಿ ಇಸಬೆಲ್ ಜಾಯ್ಸ್ ಮಾತನಾಡಿ, ‘ನನ್ನ ಪ್ರಕಾರ ನ್ಯೂಜಿಲೆಂಡ್ ತಂಡವನ್ನು ಮಣಿಸುವುದು ಕಷ್ಟ. ಆಸ್ಟ್ರೇಲಿಯಾ ಕೂಡ ಉತ್ತಮ ತಂಡ’ ಎಂದು ಹೇಳಿದ್ದಾರೆ. ‘ಟೂರ್ನಿಯಲ್ಲಿ ಭಾರತ ಕಠಿಣ ಎದುರಾಳಿ. ಆದರೆ ನಮ್ಮ ತಂಡಕ್ಕೆ ಭಾರತವನ್ನು ಮಣಿಸುವ ಸಾಮರ್ಥ್ಯ ಇದೆ’ ಎಂದು ಬಾಂಗ್ಲಾದೇಶದ ನಾಯಕಿ ಜಹನರಾ ಆಲಮ್ ಹೇಳಿದ್ದಾರೆ.

‘ಭಾರತ ತಂಡಕ್ಕೆ ಬೆಂಬಲ ನೀಡು ತ್ತೇನೆ. ಅವರು ಉತ್ತಮವಾಗಿ ಆಡುತ್ತಿ ದ್ದಾರೆ’ ಎಂದು ಅವರು ಹೇಳಿದರು. ಭಾರತ ತಂಡದ ಕೆಟ್ಟ ಕ್ಷೇತ್ರ ರಕ್ಷಣೆಯ ಬಗ್ಗೆ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ಮಿಥಾಲಿ ‘ವಿಶ್ವಕಪ್ನಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಸಿ ಆಡಲಿದ್ದೇವೆ. ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಭಾರತದ ಆಟಗಾರ್ತಿಯರು ಉತ್ತಮ ಕ್ಷೇತ್ರರಕ್ಷಣೆ ಮಾಡಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲೂ ಇದು ಮುಂದುವರಿದಿತ್ತು’ ಎಂದರು.

Write A Comment