ರಾಷ್ಟ್ರೀಯ

ತಾಜ್ಗಿಲ್ಲದ ರಕ್ಷಣೆ ರಾಂದೇವ್ ಸಂಸ್ಥೆಗೆ!

Pinterest LinkedIn Tumblr

baba-ramdev

ನವದೆಹಲಿ: ಯೋಗಗುರು ಬಾಬಾ ರಾಮ್ದೇವರ ಪತಂಜಲಿ ಫುಡ್ ಮತ್ತು ಹರ್ಬಲ್ ಪಾರ್ಕ್ಗೆ ವಾರದ ಎಲ್ಲಾ ದಿನಗಳಲ್ಲೂ 24 ಗಂಟೆಗಳ ಕಾಲ ಸಿಐಎಸ್ಎಫ್ ಭದ್ರತೆ ಒದಗಿಸಲಾಗಿದೆ.

ಮುಂಬೈನ ತಾಜ್ ಹೋಟೆಲ್ ಮೇಲೆ 26/11ರ ದಾಳಿಯ ನಂತರ ಭದ್ರತೆ ನೀಡಲು ಮುಂದಾಗಿತ್ತಾದರೂ, ಹೊಟೇಲ್ ಉದ್ಯಮ ಅಪಾಯಕಾರಿ ವಿಭಾಗವಲ್ಲ ಮತ್ತು ಖಾಸಗಿ ಕಂಪನಿಗಳಿಂದ ಭದ್ರತೆ ಪಡೆಯುವುದಾಗಿ ಹೇಳಿ ಸಿಐಎಸ್ಎಫ್ ಭದ್ರತೆಯನ್ನು ನಿರಾಕರಿಸಲಾಗಿತ್ತು. ಇತ್ತೀಚೆಗೆ ಶಿರಡಿ ಸಾಯಿಬಾಬಾ ಮಂದಿರಕ್ಕೂ ಭದ್ರತೆ ಒದಗಿಸಲು ಮುಂದಾಗಿತ್ತಾದರೂ, ಇದನ್ನು ನಿರಾಕರಿಸಲಾಗಿತ್ತು.

ತೈಲ, ವಿದ್ಯುತ್, ಸ್ಟೀಲ್ ಮತ್ತು ಐಟಿ ಕಂಪನಿಗಳಿಗೆ ಸದ್ಯ ಸಿಐಎಸ್ಎಫ್ ಭದ್ರತೆ ಒದಗಿಸಲಾಗಿದೆ. ರಿಲಯನ್ಸ್ ಜಾಮಾನಗರ್ ರಿಫೆನರೆ, ಬೆಂಗಳೂರು, ಮೈಸೂರು ಮತ್ತು ಪುಣೆಯಲ್ಲಿನ ಇನ್ಫೋಸಿಸ್ ಕಚೇರಿ, ಗುಜರಾತ್ ಪವರ್ ಲಿಮಿಟೆಡ್, ಕಾಳಿಂಗನಗರ, ಓಡಿಶಾ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಟಾಟಾ ಸ್ಟೀಲ್ಗೆ ಈ ಭದ್ರತೆ ನೀಡಲಾಗಿದ.ಎ

ರಾಮದೇವರ ಹರಿದ್ವಾರ ಮೂಲದ ಪತಂಜಲಿ ಫುಡ್ ಮತ್ತು ಹರ್ಬಲ್ ಪಾರ್ಕ್ಗೆ 35 ಸಿಐಎಸ್ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 2009ರಿಂದಲೂ ಇದಕ್ಕೆ ಭದ್ರತೆ ಒದಗಿಸಲಾಗಿದೆ. ಸಂಬಳ ಆಧಾರಿತವಾಗಿ ಆ ಭದ್ರತೆಯನ್ನು ಒದಗಿಸಲಾಗುವುದು. ಜೂನ್ 4, 2015ರಿಂದಲೂ ಆಂತರಿಕ ಭದ್ರತೆ ಒದಗಿಸಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಸಕಾರಣವನ್ನು ತಿಳಿಸಿದರೆ, ಭದ್ರತೆ ಭೀತಿ ಎದುರಿಸುತ್ತಿರುವುದನ್ನು ದೃಢಪಡಿಸಿದರೆ ತಕ್ಷಣವೇ ಸಿಐಎಸ್ಎಫ್ ಭದ್ರತೆ ಒದಗಿಸಲಾಗುತ್ತದೆ ಎಂದರು.

ಹೆಚ್ಚಿನ ವಿದೇಶಿಯರು ಬಂದು ಹೋಗುವ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ, ಭದ್ರತೆಯ ಭೀತಿ ಎದುರಾದರೆ ಈ ಸೇವೆ ಲಭ್ಯವಿದೆ. ತಿಂಗಳಿಗೆ 21 ಲಕ್ಷ ರೂ. ಭದ್ರತೆಗಾಗಿ ವ್ಯಯಿಸಬೇಕಾಗುತ್ತದೆ. ತಾತ್ಕಲಿಕ ಅಥವಾ ನಿರಂತರವಾಗಿಯೂ ಈ ಸೇವೆ ಪಡೆಯಬಹುದಾಗಿದೆ.

Write A Comment