
ಭೂಪಾಲ್: ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಏರ್ಇಂಡಿಯಾ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಲ್ಲಿನ ರಾಜಭೋಜ ವಿಮಾನನಿಲ್ದಾಣದಲ್ಲಿ ಜರುಗಿದೆ.
ಮುಂಬೈನ ಏರ್ಇಂಡಿಯಾ ವಿಮಾನದ ಎಂಜಿನ್ಗೆ ಪಕ್ಷಿಯೊಂದು ಅಡ್ಡ ಬಂದು ಡಿಕ್ಕಿ ಹೊಡೆದ ಪರಿಣಾಮ ವಿಮಾನ ತುರ್ತಾಗಿ ಲ್ಯಾಂಡ್ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ಸಣ್ಣ ಘಟನೆ, ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ನಂತರ ದುರಸ್ಥಿ ಪಡಿಸಿದ್ದು, 15-20 ನಿಮಿಷದಲ್ಲಿ ಯಥಾ ರೀತಿ ಹಾರಾಟ ನಡೆಸಿತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.