ಕರ್ನಾಟಕ

ಬೇಕಾಬಿಟ್ಟಿ ಗೌರವ ಡಾಕ್ಟರೇಟ್ ಪ್ರದಾನ;ವಿವಿ ವಿರುದ್ಧ ಗವರ್ನರ್ ಗರಂ

Pinterest LinkedIn Tumblr

Vajubhai-Rudabhai-Vala-650
ಬೆಂಗಳೂರು:ಬೇಕಾಬಿಟ್ಟಿಯಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿರುವ ಬಗ್ಗೆ ವಿಶ್ವವಿದ್ಯಾಲಯಗಳ ವಿಸಿಗಳನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರು ತೀವ್ರ ಅಸಮಾಧಾನವ್ಯಕ್ತಪಡಿಸಿ, ಹೊಸ ಮಾನದಂಡವನ್ನು ಪ್ರಕಟಿಸಿದ್ದಾರೆ.

ವಿಶ್ವವಿದ್ಯಾಲಯಗಳಿಂದ ಒತ್ತಡ ಹೇರಿದವರಿಗೆ, ಲಾಬಿ ಮಾಡಿದವರಿಗೆಲ್ಲಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುಕ್ಕೆ ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಡಾಕ್ಟರೇಟ್ ಪ್ರದಾನ ಮಾಡಿದ್ದೀರಿ. ಅವರ ಸೇವೆಯಿಂದ ಸಮಾಜಕ್ಕೆ ಏನು ಉಪಯೋಗ, ಯಾವ ಆಧಾರದಲ್ಲಿ ನೀವು ಅವರಿಗೆ ಡಾಕ್ಟರೇಟ್ ನೀಡಿದ್ದೀರಿ ಎಂದು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡಿದ್ದಾರೆ.

ಗೌರವ ಡಾಕ್ಟರೇಟ್ ಅನ್ನು ಬೇಕಾಬಿಟ್ಟಿಯಾಗಿ ಪ್ರದಾನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಒಟ್ಟಾರೆ 8 ಅಂಶಗಳಿರುವ ನೂತನ ಮಾನದಂಡ ಪಟ್ಟಿ ಪ್ರಕಟ ಮಾಡಿದ್ದಾರೆ.

ರಾಜ್ಯಪಾಲರ ನೂತನ ಮಾನದಂಡದ ಮುಖ್ಯಾಂಶಗಳು:
*ವಿವಿ ಸಿಂಡಿಕೇಟ್ ನಿಂದ ಹೆಸರುಗಳ ಶಿಫಾರಸು ಆಗಬೇಕು.
*ರಾಜ್ಯಪಾಲರಿಂದಲೇ ನೂತನ ಪರಿಶೀಲನಾ ಸಮಿತಿ ರಚನೆ
*ಡಾಕ್ಟರೇಟ್ ಪಟ್ಟಿ ಅಂತಿಮಗೊಳಿಸಲಿರುವ ಪರಿಶೀಲನಾ ಸಮಿತಿ
*1 ಬಾರಿಗೆ 3ಕ್ಕಿಂತ ಹೆಚ್ಚು ಗಣ್ಯರ ಶಿಫಾರಸು ಬೇಡ.
*ಘಟಿಕೋತ್ಸವಕ್ಕೆ 45 ದಿನ ಇರುವಂತೆಯೇ ಪಟ್ಟಿ ಅಂತಿಮಗೊಳಿಸಿ.
-ಉದಯವಾಣಿ

Write A Comment