ಕನ್ನಡ ವಾರ್ತೆಗಳು

ಮಾರ್ಚ್ 12 : ಕರ್ನಾಟಕ ರಾಜ್ಯದ ಅತೀ ಎತ್ತರದ ವಸತಿ ಸಮುಚ್ಚಯ ‘ಪ್ಲಾನೆಟ್ ಎಸ್‌ಕೆಎಸ್’ ಉದ್ಘಾಟನೆ

Pinterest LinkedIn Tumblr

SKS_Press_Meet_1

ವರದಿ ಹಾಗೂ ಚಿತ್ರಗಳು : ಸತೀಶ್ ಕಾಪಿಕಾಡ್

ಮಂಗಳೂರು, ಮಾ.9: ರಾಜ್ಯದಲ್ಲಿಯೇ ಅತೀ ಎತ್ತರದ ವಸತಿ ಸಮುಚ್ಚಯ ‘ಪ್ಲಾನೆಟ್ ಎಸ್‌ಕೆಎಸ್’ನ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ನಿರ್ಮಾಣ ಪೂರ್ಣಗೊಂಡ ರಾಜ್ಯದ ಅತಿ ಎತ್ತರದ ವಸತಿ ಸಮುಚ್ಚಯ ಕಟ್ಟಡ ಎಂಬ ಕೀರ್ತಿಗೆ ಪ್ಲಾನೆಟ್ ಎಸ್‌ಕೆಎಸ್ ಪಾತ್ರವಾಗಿದೆ. ಪ್ಲಾನೆಟ್ ಎಸ್‌ಕೆಎಸ್’ನ ಉದ್ಘಾಟನೆ ಮಾರ್ಚ್ 12ರಂದು ದೇಶ ವಿದೇಶದ ಅತಿಥಿ ಗಣ್ಯರ ಸಮಕ್ಷಮದಲ್ಲಿ ನಡೆಯಲಿದೆ ಎಂದು ಪ್ಲಾನೆಟ್ ಎಸ್‌ಕೆಎಸ್’ನ ಪ್ರಧಾನ ಪ್ರವರ್ತಕರಾದ ಶಶಿ ಕಿರಣ್ ಶೆಟ್ಟಿ ಅವರು ತಿಳಿಸಿದ್ದಾರೆ.

ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2010ರ ಡಿಸೆಂಬರ್ 15ರಂದು ಪ್ಲಾನೆಟ್ ಎಸ್‌ಕೆಎಸ್ ಕಟ್ಟಡದ ಕಾಮಗಾರಿ ಆರಂಭಗೊಂಡಿದ್ದು, 4.55 ಎಕರೆ ವಿಶಾಲವಾದ ಪ್ರದೇಶದಲ್ಲಿ 9,20,000 ಚದರ ಅಡಿ ವಿಸ್ತೀರ್ಣದ ಕಟ್ಟಡ ಇದೀಗ ಪೂರ್ಣಗೊಂಡಿದೆ. ಪ್ಲಾನೆಟ್ ಎಸ್‌ಕೆಎಸ್’ನ ಇನ್ನೋರ್ವ ಪ್ರವರ್ತಕರಾದ ಮಂಗಳೂರಿನವರೇ ಆದ ಸನತ್ ಕುಮಾರ್ ಶೆಟ್ಟಿ ಅವರು ನೂತನ ಕಟ್ಟಡದ ಆರ್ಕಿಟೆಕ್ಟ್ ಆಗಿದ್ದು, ‘ದಿ ಅವಶ್ಯ ಗ್ರೂಪ್ ’ ನ ಎಸ್‌ಕೆಎಸ್ ನೆಟ್‌ಗೇಟ್ ಎಲ್‌ಎಲ್‌ಪಿಯ ಈ ಯೋಜನೆಗೆ ಪ್ರತಿಷ್ಠಿತ ಲಾರ್ಸೆನ್ ಆ್ಯಂಡ್ ಟುಬ್ರೋ ಲಿಮಿಟೆಡ್ ಗುತ್ತಿಗೆವಹಿಸಿಕೊಂಡಿದೆ ಎಂದು ಹೇಳಿದರು.

ಒಂದು ಮಹಡಿಯಿಂದ ಮತ್ತೊಂದು ಮಹಡಿಯ ಎತ್ತರ 3.2 ಮೀಟರ್‌ಗಳಾಗಿದ್ದು, ಈ ಕಟ್ಟಡದಲ್ಲಿ 7 ವಿಶೇಷ ಮಿಟ್ಸುಬಿಶಿ ಲಿಫ್ಟ್‌ಗಳಿವೆ. ವೈದ್ಯಕೀಯ ತುರ್ತು ಸಂದರ್ಭಗಳಿಗೆ ಒಂದು ವಿಶೇಷ ಲಿಫ್ಟ್ ಇದೆ. 100 ಶೇ. ಜನರೇಟರ್ ಬ್ಯಾಕ್‌ಅಪ್ ಇದೆ. ಎಲ್ಲ ಕಿಟಕಿಗಳಿಗೆ ವಿಶೇಷ ವಿನ್ಯಾಸದ ಅಲ್ಯುಮಿನಿಯಮ್ ಅಚ್ಚುಗಳಿದ್ದು, ಟಫನ್ಡ್ ಗ್ಲಾಸುಗಳನ್ನು ಹಾಕಲಾಗಿದೆ. ಬಾಲ್ಕನಿಯ ರೇಲಿಂಗ್‌ಗೂ ಕಠಿಣವಾದ ಮತ್ತು ಲ್ಯಾಮಿನೇಶನ್‌ನಿಂದ ಕೂಡಿದ ಗಾಜನ್ನು ಅಳವಡಿಸಲಾಗಿದೆ.

ಕಟ್ಟಡದ ಭದ್ರತೆಗಾಗಿ 100 ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ತಪಾಸಣಾ ಮತ್ತು ಮಾಹಿತಿ ಸಂಗ್ರಹ ವ್ಯವಸ್ಥೆ, ಸ್ವಯಂಚಾಲಿತ ಪ್ರವೇಶ ನಿಯಂತ್ರಣ ವ್ಯವಸ್ಥೆ, ಬಯೊಮೆಟ್ರಿಕ್ ಲಾಕ್ ಮೊದಲಾದ ಅತ್ಯಾಧುನಿಕ ಸುರಕ್ಷಾ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗಿದೆ ಎಂದು ವಿವರಿಸಿದರು.

SKS_Press_Meet_2 SKS_Press_Meet_3 SKS_Press_Meet_4 SKS_Press_Meet_5 SKS_Press_Meet_6 SKS_Press_Meet_7 SKS_Press_Meet_8 SKS_Press_Meet_9 SKS_Press_Meet_10 SKS_Press_Meet_11 SKS_Press_Meet_12 SKS_Press_Meet_13 SKS_Press_Meet_14 SKS_Press_Meet_15 SKS_Press_Meet_16 SKS_Press_Meet_17 SKS_Press_Meet_18 SKS_Press_Meet_19 SKS_Press_Meet_20

ಉದ್ಘಾಟನೆಯಾಗುವ ಮೊದಲೇ ಪ್ರತಿಷ್ಠಿತ ಪ್ರಶಸ್ತಿ :

ಉದ್ಘಾಟನೆಯಾಗುವ ಮೊದಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರವಾಗಿದೆ ಪ್ಲಾನೆಟ್ ಎಸ್‌ಕೆಎಸ್. 2011ರಲ್ಲಿ ಆರ್ಟಿಸ್ಟ್ಸ್ ಇನ್ ಕಾಂಕ್ರೀಟ್ ಅವಾರ್ಡ್ಸ್.2012 ರಲ್ಲಿ ಕ್ರೆಡೈ ಮೋಸ್ಟ್ ಎಮರ್ಜಿಂಗ್ ಡೆವಲಪರ್ಸ್ ಪ್ರಶಸ್ತಿ. 2014 ರಲ್ಲಿ ಬ್ರಿಟಿಶ್ ಸೇಫ್ಟಿ ಕೌನ್ಸಿಲ್‌ನಿಂದ ಇಂಟರ್‌ನ್ಯಾಶನಲ್ ಸೇಫ್ಟಿ ಅವಾರ್ಡ್. 2015 ರಲ್ಲಿ ಸಿಎನ್‌ಬಿಸಿ ಆವಾಝ್‌ನಿಂದ ಬೆಸ್ಟ್ ರೆಸಿಡೆನ್ಶಿಯನಲ್ ಪ್ರಾಜೆಕ್ಟ್ ಇನ್ ಟೈರ್ 2 ಸಿಟಿ ಅಂಡರ್ ಅಲ್ಟ್ರಾ ಲಕ್ಸುರಿ ಸೆಗ್ಮೆಂಟ್ ಪ್ರಶಸ್ತಿ. 2016 ರಲ್ಲಿ ಎಸಿಇಎಫ್‌ನಿಂದ ಬೆಸ್ಟ್ ಪ್ರಾಜೆಕ್ಟ್ ಪ್ರಶಸ್ತಿ ಎಸ್‌ಕೆಎಸ್‌ಗೆ ಬಂದಿದೆ ಎಂದು ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದರು.

ಪರಿಸರ ಸಹ್ಯ ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆ :

ಪ್ಲಾನೆಟ್ ಎಸ್‌ಕೆಎಸ್ ಕಟ್ಟಡದ ಆಂತರಿಕ ಮತ್ತು ಬಾಹ್ಯ ಪ್ರದೇಶಗಳು ಸೌರ ಮತ್ತು ಪವನ ಶಕ್ತಿ ಚಾಲಿತ ವ್ಯವಸ್ಥೆಯನ್ನು ಹೊಂದಿದ್ದು, ಸೋಲಾರ್ ವಾಟರ್ ಹೀಟರ್‌ಗಳು ಮತ್ತು ತಾಪಮಾನ ನಿಯಂತ್ರಣಕ್ಕಾಗಿ ಆ್ಯಕ್ಟಿವ್ ಸಿಸ್ಟಮ್ ಹೀಟ್ ಪಂಪ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಎಲ್‌ಇಡಿ ಲೈಟ್ ಅಳವಡಿಸಲಾಗಿದ್ದು, ಅಪಾರ್ಟ್‌ಮೆಂಟ್‌ಗಳೆಲ್ಲವೂ ಗರಿಷ್ಠ ಪ್ರಾಕೃತಿಕ ಗಾಳಿ ಬೆಳಕಿನಿಂದ ಕೂಡಿರುವುದರಿಂದ ಕಡಿಮೆ ವಿದ್ಯುತ್ ಬಳಕೆಗೆ ಒತ್ತು ನೀಡಲಾಗಿದೆ. ಕಲುಷಿತ ನೀರಿನ ಮರುಬಳಕೆ, ಕೊಳಚೆ ನೀರು ಸಂಸ್ಕರಣಾ ಘಟಕ, ಸ್ವಯಂಚಾಲಿತ ಸಾವಯವ ತ್ಯಾಜ್ಯ ಪರಿವರ್ತಕ, ಮಳೆ ನೀರು ಕೊಯ್ಲು, ಸುಸ್ಥಿರ ಹಸಿರು ವಿನ್ಯಾಸ, ಹಣ್ಣಿನ ತೋಟ, ಅಡಿಕೆ ತೋಟ, 20,000 ಚದರ ಅಡಿ ಲಾನ್ – ಇತ್ಯಾದಿಗಳಿಂದ ಸುತ್ತಮುತ್ತಲು ಹಸಿರು ಕಂಗೊಳಿಸುತ್ತದೆ.

ಸಿನೆಮಾ ಥಿಯೇಟರ್ – ಪ್ಲಡ್‌ಲಿಟ್ ಟೆನ್ನಿಸ್ ಕೋರ್ಟ್, ಇಂಡೋರ್ ಸ್ಟೇಡಿಯಂ ವಿಶೇಷತೆ :

ಪ್ಲಡ್‌ಲಿಟ್ ಟೆನ್ನಿಸ್ ಕೋರ್ಟ್, ಇಂಡೋರ್ ಬ್ಯಾಡ್‌ಮಿಂಟನ್ ಕೋರ್ಟ್, ಸ್ಕ್ವಾಶ್ ಕೋರ್ಟ್, ಬಾಸ್ಕೆಟ್‌ಬಾಲ್ ರಿಂಕ್, ಬಿಲಿಯರ್ಡ್, ಕೇರಂ, ಟೇಬಲ್ ಟೆನ್ನಿಸ್, ಸ್ಪಾ, ಯೋಗಾ ರೂಂ, ಜಿಮ್‌ನಿಂದ ಕೂಡಿದ ಕ್ಲಬ್ ಹೌಸ್ ಪ್ಲಾನೆಟ್ ಎಸ್‌ಕೆಎಸ್‌ನ ವಿಶೇಷತೆಯಾಗಿದೆ.

ದೊಡ್ಡವರು ಮತ್ತು ಮಕ್ಕಳಿಗಾಗಿ ಗಾಲ್ಫ್ ಸಿಮ್ಯುಲೇಟರ್ ಮತ್ತು ಸ್ವಿಮ್ಮಿಂಗ್ ಪೂಲ್‌ಗಳು, ಮೀಟಿಂಗ್ ಹಾಲ್, ಸಿನೆಮಾ ಥಿಯೇಟರ್, ಜಾಗಿಂಗ್ ಮತ್ತು ಸ್ಕೇಟಿಂಗ್ ಟ್ರಾಕ್, ಸೂಪರ್ ಮಾರ್ಕೆಟ್, ಕಾಫಿ ಶಾಪ್, ಔಟ್‌ಡೋರ್ ಲ್ಯಾಂಡ್‌ಸ್ಕೇಪ್ ಟೆರೆಸ್ ಏರಿಯಾವನ್ನು ಈ ಕಟ್ಟಡ ಹೊಂದಿದೆ.

ಯಾವುದು ಉತ್ತಮ ಎಂಬುದು ಅಭಿಪ್ರಾಯಕ್ಕೆ ಸಂಬಂಧಿಸಿದ್ದು. ಹಾಗಿದ್ದರೂ, ಇತರರಿಂದ ಗುರುತಿಸಲ್ಪಟ್ಟಾಗ, ಪ್ರಶಂಸಿಸಲ್ಪಟ್ಟಾಗ, ಸ್ವಾಗತಿಸಲ್ಪಟ್ಟಾಗ ಅದಕ್ಕೆ ವೌಲ್ಯ ಸಿಗುತ್ತದೆ. ಈ ಹಿನ್ನೆಲೆಯಲ್ಲಿ, ಅತ್ಯಂತ ಸಮರ್ಪಣಾ ಭಾವದೊಂದಿಗೆ ನಮ್ಮ ಜ್ಞಾನ, ಅನುಭವ, ಸಂಪನ್ಮೂಲ, ಕೌಶಲ್ಯಗಳು ಮತ್ತು ಕಲ್ಪನೆಯನ್ನು ಬಳಸಿಕೊಂಡು ಮಾಡಿದ ನಮ್ಮ ವಿನಮ್ರ ಪ್ರಯತ್ನವಾಗಿದೆ ‘ಪ್ಲಾನೆಟ್ ಎಸ್‌ಕೆಎಸ್’ . ಇದೊಂದು ಸುಖ-ಶಾಂತಿ ನೀಡುವ ಪುಟ್ಟ ಗೃಹವಾಗಲಿ ಎಂಬುದು ನಮ್ಮ ಪ್ರಾರ್ಥನೆ ಎಂದು ಶಶಿಕಿರಣ್ ಶೆಟ್ಟಿ ಹೇಳಿದರು.

SKS_Press_Meet_21 SKS_Press_Meet_22 SKS_Press_Meet_23 SKS_Press_Meet_24 SKS_Press_Meet_25 SKS_Press_Meet_26 SKS_Press_Meet_27 SKS_Press_Meet_28 SKS_Press_Meet_29 SKS_Press_Meet_30 SKS_Press_Meet_31 SKS_Press_Meet_32 SKS_Press_Meet_33 SKS_Press_Meet_34 SKS_Press_Meet_35

ಪ್ಲಾನೆಟ್ ಎಸ್‌ಕೆಎಸ್ ವಿಶೇಷತೆಗಳು :

* ಕಟ್ಟಡದ ಎತ್ತರ 125 ಮೀಟರ್ * 40 ಮಹಡಿಗಳು (3 ಬೇಸ್‌ಮೆಂಟ್‌ಗಳು, ಗ್ರೌಂಡ್ ಫ್ಲೋರ್ ಮತ್ತು 36 ಮಹಡಿಗಳು)

* 171 ಅಪಾರ್ಟ್‌ಮೆಂಟ್‌ಗಳು

* 430 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ

* 3 ಬೆಡ್‌ರೂಂಗಳ (3300 ಚದರ ಅಡಿ ವಿಸ್ತೀರ್ಣ) 126 ಅಪಾರ್ಟ್‌ಮೆಂಟ್‌ಗಳು (ನೆಲಮಹಡಿಯಿಂದ 20ನೆ ಮಹಡಿವರೆಗೆ)

* ನಾಲ್ಕು ಬೆಡ್ ರೂಂಗಳ (6600 ಚದರ ಅಡಿ ವಿಸ್ತೀರ್ಣ) 45 ಅಪಾರ್ಟ್‌ಮೆಂಟ್‌ಗಳು (21ನೆ ಮಹಡಿಯಿಂದ 36ನೆ ಮಹಡಿವರೆಗೆ)

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ಲಾನೆಟ್ ಎಸ್‌ಕೆಎಸ್’ನ ಇನ್ನೋರ್ವ ಪ್ರವರ್ತಕ ಹಾಗೂ ಅರ್ಕಿಟೆಕ್ಟ್ ಸನತ್ ಕುಮಾರ್ ಶೆಟ್ಟಿ ಹಾಗೂ ಶಶಿ ಕಿರಣ್ ಶೆಟ್ಟಿ ಅವರ ಪುತ್ರ ಪ್ಲಾನೆಟ್ ಎಸ್‌ಕೆಎಸ್’ನ ಸಹ ಪ್ರವರ್ತಕರಾದ ವೈಷ್ಣವ್ ಶೆಟ್ಟಿ ಅವರು ಪೂರಕ ಮಾಹಿತಿ ನೀಡಿದರು.

ವರದಿ ಹಾಗೂ ಚಿತ್ರಗಳು : ಸತೀಶ್ ಕಾಪಿಕಾಡ್

Write A Comment