ಕರ್ನಾಟಕ

ಕಟ್ ಆಂಡ್ ಪೇಸ್ಟ್ ಪುಸ್ತಕ ಬರವಣಿಗೆ ಅಲ್ಲ

Pinterest LinkedIn Tumblr

vcಬೆಂಗಳೂರು: ಇಂಟರ್ನೆಟ್​ನಲ್ಲಿ ದೊರಕುವ ಮಾಹಿತಿ ಒಟ್ಟುಗೂಡಿಸಿ ಮತ್ತೊಂದೆಡೆ ಅಂಟಿಸಿ ಪ್ರಕಟಿಸುವುದರಿಂದ ಉತ್ತಮ ಪುಸ್ತಕ ತಯಾರಾಗುವುದಿಲ್ಲ ಎಂದು ಶತಾವಧಾನಿ ಡಾ. ರಾ. ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.ವಿ.ಸೀ.

ಸಂಪದ ವತಿಯಿಂದ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿ.ಸೀ. ಸಮಗ್ರ ಸಾಹಿತ್ಯ ಮಾಲೆಯ 22ನೇ ಸಂಪುಟ ‘ಸಂಕೀರ್ಣ ಬರಹ ಸಂಪುಟ ಭಾಗ-3’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿ.ಸೀತಾರಾಮಯ್ಯ ತಮ್ಮ ಬರವಣಿಗೆಯನ್ನು ಬಹಳ ಪ್ರಿತಿಸುತ್ತಿದ್ದರು. ಸಾಕಷ್ಟು ಪುಸ್ತಕಗಳನ್ನು ಅಭ್ಯಸಿಸಿ ಪುಸ್ತಕ ಬರವಣಿಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಪ್ರತಿ ಲೇಖನ ರೂಪುಗೊಳ್ಳುವಲ್ಲೂ ಈ ಶ್ರಮವಿರುತ್ತಿತ್ತು. ರಚನೆಯಾದ ಪುಸ್ತಕ ಈಗ ಮಾತ್ರವಲ್ಲದೆ ಮುಂದಿನ ತಲೆಮಾರನ್ನೂ ಪ್ರಭಾವಿಸುವಂತಿರುತ್ತಿತ್ತು ಎಂದರು.

ಪುಸ್ತಕ ಬರೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಬರವಣಿಗೆ ಸಿದ್ಧತೆ ಸೂಕ್ತವಾಗಿರಬೇಕು. ಇಂತಹ ಅನೇಕ ಲೇಖಕರಿಗೆ ಪುಸ್ತಕ ಓದುವ ಅಭ್ಯಾಸವೂ ಇರುವುದಿಲ್ಲ. ಇಂಟರ್ನೆಟ್ ಮಾಹಿತಿಯನ್ನು ಕಟ್, ಕಾಪಿ, ಪೇಸ್ಟ್ ಮಾಡಿ ಪುಸ್ತಕ ರಚನೆ ಸರಿಯಾದದ್ದಲ್ಲ. ವಿ.ಸೀ.ಯವರ ಇನ್ನೂ 8 ಸಂಪುಟ ಪ್ರಕಟವಾಗಬಹುದು ಎಂದರು.

ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ಮಾತನಾಡಿ, ವಿ.ಸೀ ಸೇರಿ ಪ್ರಮುಖರ ಪುಸ್ತಕಗಳನ್ನು ರಾಜಕಾರಣಿಗಳು ಓದಬೇಕು. ಇಂದು ಎಲ್ಲೆಡೆ ನಡೆಯುತ್ತಿರುವ ಕೀಳುಮಟ್ಟದ ರಾಜಕಾರಣವನ್ನು ಸರಿಪಡಿಸುವ ಶಕ್ತಿ ಇಂತಹ ಸಾಹಿತ್ಯಕ್ಕಿದೆ ಎಂದರು.

Write A Comment