ರಾಷ್ಟ್ರೀಯ

ಕೇರಳದಲ್ಲಿ ಕನ್ಹಯ್ಯಾ ಚುನಾವಣಾ ಪ್ರಚಾರ ನಡೆಸಿದರೂ ಭಯವಿಲ್ಲ

Pinterest LinkedIn Tumblr

kannaಬೆಂಗಳೂರು: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪಿಎಚ್.ಡಿ. ವಿದ್ಯಾರ್ಥಿ ಕನ್ಹಯ್ಯಾ ಕುಮಾರ್ ಕೇರಳದಲ್ಲಿ ಕಮ್ಯುನಿಸ್ಟ್ ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್​ಡಿಎಫ್) ಪರ ಪ್ರಚಾರ ನಡೆಸಲು ಬಂದರೆ ನಾವು ಪ್ರತಿತಂತ್ರ ರೂಪಿಸಲು ಸಿದ್ಧರಿದ್ದೇವೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ತಿಳಿಸಿದ್ದಾರೆ.

ಕೇರಳ ವಿಧಾನಸಭೆಗೆ ಮೇ 16ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕೇರಳಿಗರ ಸಮಾವೇಶಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ಹಯ್ಯಾಕುಮಾರ್ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಅವರು ಬಂದರೆ ನಮಗ್ಯಾವ ಭಯವಿಲ್ಲ. ನ್ಯಾಯಾಲಯದ ಆದೇಶ ಸೇರಿ ಕಾನೂನು ಅವಕಾಶ ನೀಡಿದರೆ ಕನ್ಹಯ್ಯಕುಮಾರ್ ಪ್ರಚಾರ ನಡೆಸಲು ನಮ್ಮ ಅಭ್ಯಂತರವೂ ಇಲ್ಲ. ಕೇರಳ ಮೂಲದ ಕೆಲವು ವಿದ್ಯಾರ್ಥಿಗಳೂ ಜೆಎನ್​ಯುುನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅವರೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದೆ. ನಾವು ಪ್ರತಿರೋಧ ತೋರುವುದಿಲ್ಲ ಎಂದರು.

ಈಗಾಗಲೇ ಚುನಾವಣೆ ತಯಾರಿ ಆರಂಭವಾಗಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಭಾರತ ಧರ್ಮ ಜನಸೇವಾ ಪಕ್ಷ ಎನ್​ಡಿಎ ಜತೆ ಕೈಜೋಡಿಸಿದೆ. ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಆಡಳಿತದಿಂದ ಬೇಸತ್ತಿರುವ ಕೇರಳ ಜನತೆ ಈ ಬಾರಿ ನಿಶ್ಚಿತವಾಗಿ ಎನ್​ಡಿಎ ಬೆಂಬಲಿಸಲಿದ್ದಾರೆ. 140ರಲ್ಲಿ 71ಕ್ಕಿಂತ ಹೆಚ್ಚಿನ ಸ್ಥಾನ ಪಡೆಯಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿರ್ಮಲ್​ಕುಮಾರ್ ಸುರಾನ ಉಪಸ್ಥಿತರಿದ್ದರು. ಬೆಂಗಳೂರಿನಲ್ಲಿರುವ, ಸಾಮಾಜಿಕ ಜಾಲತಾಣ ಬಳಸುವ ಕೇರಳಿಗರ ಸಮಾವೇಶದಲ್ಲಿ 200ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಸಂಜೆ ರಾಮಮೂರ್ತಿನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇರಳ ಮೂಲದ 1,500 ನಾಗರಿಕರು ಭಾಗವಹಿಸಿದ್ದರು.

ಜೆಎನ್​ಯುುನಲ್ಲಿ ನಿಜವಾಗಿಯೂ ನಡೆದದ್ದೇನು ಎಂಬ ವಿಷಯವನ್ನು ಕೇರಳ ಜನರಿಗೆ ಮನದಟ್ಟು ಮಾಡಿಕೊಡುತ್ತೇವೆ. ಜೆಎನ್​ಯುು ವಿದ್ಯಾರ್ಥಿ, ಪ್ರಾಧ್ಯಾಪಕರು ಸೇರಿ ತಜ್ಞರನ್ನು ಆಹ್ವಾನಿಸಿ ಸಂವಾದ, ಸಭೆಗಳನ್ನು ನಡೆಸುತ್ತೇವೆ. ಎಲ್ಲ ವಿಚಾರಗಳನ್ನು ತಿಳಿದ ಮತದಾರರು ತಮಗೆ ಸರಿ ಅನಿಸಿದವರಿಗೆ ಮತ ನೀಡಲಿ.

| ರಾಜಶೇಖರನ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ

Write A Comment