ಕರ್ನಾಟಕ

ನಟಿ ಪ್ರೇಮಾ ವೈವಾಹಿಕ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ

Pinterest LinkedIn Tumblr

prema jeevan-appachu

ಬೆಂಗಳೂರು: ಖ್ಯಾತ ಚಿತ್ರ ನಟಿ ಪ್ರೇಮ ದಾಂಪತ್ಯದಲ್ಲಿ 10 ವರ್ಷಗಳ ಬಳಿಕ ಬಿರುಕು ಮೂಡಿದ್ದು, ಇಂದು ಪ್ರೇಮಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ನಟಿ ಪ್ರೇಮ ಅರ್ಜಿ ಸಲ್ಲಿಸಿದ್ದಾರೆ. 2006ರಲ್ಲಿ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ಮದುವೆಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಪ್ರೇಮ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಪರಸ್ಪರ ಒಪ್ಪಿಗೆ ಮೇರೆಗೆ ಸೆಕ್ಷನ್ 13 ಬಿ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಚ್ಛೇದನ ನೀಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ‘ಸವ್ಯಸಾಚಿ’ ಎಂಬ ಚಿತ್ರದ ಮೂಲಕ 1996ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ಪ್ರೇಮಾ ಅವರು ಕನ್ನಡದಲ್ಲಿ 50 ಸಿನಿಮಾ, ತೆಲುಗು 25, ತಮಿಳು 1 ಹಾಗೂ ಮಲಯಾಳಂನ 2 ಸಿನಿಮಾಗಳಲ್ಲಿ ನಟಿಸಿದ್ದಾರೆ.

Write A Comment