ಕರ್ನಾಟಕ

ಹೆಲ್ಮೆಟ್ ಧರಿಸಿಲ್ಲ ಎಂದು ಕಾರು ಮಾಲೀಕನಿಗೆ ನೋಟಿಸ್ ನೀಡಿದ ಟ್ರಾಫಿಕ್ ಪೊಲೀಸ್

Pinterest LinkedIn Tumblr

notice-new

ಬೆಂಗಳೂರು: ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಕಾರು ಮಾಲೀಕರಿಗೆ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಿಜೆಪಿಯ ರಾಜ್ಯ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ಎಸ್.ಪ್ರಕಾಶ್ ಅವರಿಗೆ ಈ ನೋಟಿಸ್ ಕಳುಹಿಸಿದ್ದು ಭಾನುವಾರ ತಲುಪಿದೆ.

ಫೆ.4 ರಂದು ಮಧ್ಯಾಹ್ನ ಬಸವೇಶ್ವರ ವೃತ್ತದಲ್ಲಿ ಬೈಕ್‌ನ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಪ್ರಕಾಶ್ ಅವರ ಕಾರಿನ ನೋಂದಣಿ ಸಂಖ್ಯೆ ಉಲ್ಲೇಖಿಸಿ (ಕೆಎ 04 ಎಂಪಿ 7257) ಈ ನೋಟಿಸ್ ಕಳುಹಿಸಲಾಗಿದೆ. ಜೊತೆಗೆ 100 ರು. ದಂಡ ಕಟ್ಟಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ನೋಟಿಸ್‌ನಿಂದಾಗಿ ಆಕ್ರೋಶಗೊಂಡ ಪ್ರಕಾಶ್, ‘ಇದು ಸಂಚಾರ ಪೊಲೀಸರ ನಿರ್ಲಕ್ಷ್ಯಕ್ಕೆ ಕಾರಣ. ಈ ರೀತಿಯ ಎಡವಟ್ಟಿನಿಂದಾಗಿ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುತ್ತಾರೆ. ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ. ತಾಂತ್ರಿಕ ತೊಂದರೆಯಿಂದಾಗಿ ಈ ರೀತಿ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

Write A Comment