ಕರ್ನಾಟಕ

ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಮನು ಬಳಿಗಾರ್ ಆಯ್ಕೆ

Pinterest LinkedIn Tumblr

Kannada Sahitya Parishath election candidate Manu Baligar at National High School ground Basavanagudi, in Bengaluru on Sunday. -Photo/ Ranju P

ಬೆಂಗಳೂರು: ದಶಕಗಳ ಇತಿಹಾಸ ವಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಹುದ್ದೆಗೆ ಭಾನುವಾರ ಚುನಾವಣೆ ನಡೆದಿದ್ದು, ಪರಿಷತ್ತಿನ ಅಧ್ಯಕ್ಷರಾಗಿ ಡಾ.ಮನು ಬಳಿಗಾರ್ ಅವರು ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ.

ಕನ್ನಡ ಮತ್ತು ಸ೦ಸ್ಕೃತಿ ಇಲಾಖೆಯ ಅಧಿಕಾರಿಯಾಗಿ ಖ್ಯಾತರಾಗಿದ್ದ ಡಾ. ಮನು ಬಳಿಗಾರ್ ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ 25ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಭಾನುವಾರ ನಡೆದ ಚುನಾವಣೆಯಲ್ಲಿ ರಾಜ್ಯದ ಒಟ್ಟು 292 ಮತಕೇ೦ದ್ರಗಳಲ್ಲಿ 1,08,538 ಮತದಾರರು ಹಕ್ಕು ಚಲಾಯಿಸಿದ್ದರು. ರಾತ್ರಿ ವೇಳೆಗೆ ಎಲ್ಲ 30 ಜಿಲ್ಲೆಗಳ ಫಲಿತಾ೦ಶ ಪ್ರಕಟವಾಗಿದ್ದು, ಈ ಪ್ಯೆಕಿ ಮನು ಬಳಿಗಾರ್ ಅವರಿಗೆ 53,070 ಮತಗಳು ಲಭಿಸಿದ್ದು, ಅವರು ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಪ್ರೊ. ಬಿ. ಜಯಪ್ರಕಾಶ್ ಗೌಡರಿಗೆ 19,346 ಮತಗಳು ಲಭೀಸಿವೆ.

ಹೊರರಾಜ್ಯಗಳ, ವಿದೇಶಿ ಸದಸ್ಯರ ಮತ ಎಣಿಕೆಯ ನ೦ತರ ಮ೦ಗಳವಾರ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾ೦ಶ ಘೋಷಿಸಲಿದ್ದಾರೆ. ಆದರೆ ಈ ಮತಗಳ ಸ೦ಖ್ಯೆ 1,774ರಷ್ಟಿರುವ ಕಾರಣ ಬಳಿಗಾರ್ ಆಯ್ಕೆಯ ಮೇಲೆ ಯಾವುದೇ ಪರಿಣಾಮ ಬೀರದು ಎನ್ನಲಾಗುತ್ತಿದೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ 25ನೇ ಅಧ್ಯಕ್ಷರಾಗಿ ಮನ ಬಳಿಗಾರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Write A Comment