ಕರ್ನಾಟಕ

ಇಂದಿನಿಂದ ವರ್ಷದ ಮೊದಲ ಅಧಿವೇಶನ; ಕೋಲಾಹಲ ಸೃಷ್ಟಿಸಲಿರುವ ಸಿ.ಎಂ ವಾಚು ಪ್ರಕರಣ

Pinterest LinkedIn Tumblr

watch

ಬೆಂಗಳೂರು: ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚು ವಿವಾದ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಮತ್ತು  ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಈ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸುವುದು ನಿಚ್ಚಳವಾಗಿದೆ.

‘ಸಿದ್ದರಾಮಯ್ಯ ಅವರು ದುಬಾರಿ ವಾಚು ಕಟ್ಟುತ್ತಾರೆ’ ಎಂದು ಹೇಳಿಕೆ ನೀಡಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ವಿವಾದ ಹುಟ್ಟುಹಾಕಿದ್ದರೂ, ಎರಡೂ ಸದನಗಳಲ್ಲಿ ಬಿಜೆಪಿ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಲು ಸಿದ್ಧತೆ ಮಾಡಿಕೊಂಡಿದೆ.

ಉಳಿದಂತೆ, ಬರ, ವಿದ್ಯುತ್‌ ಕೊರತೆ, ಕುಡಿಯುವ ನೀರಿನ ಸಮಸ್ಯೆಗಳು ಉಭಯ ಸದನಗಳಲ್ಲೂ ‘ಕಾವೇರಿಸುವ’ ನಿರೀಕ್ಷೆ ಇದೆ.

ರಾಜ್ಯದ ಕಾನೂನು ಸುವ್ಯವಸ್ಥೆ, ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ ಬಿ. ಅಡಿ ಪದಚ್ಯುತಿ ಪ್ರಯತ್ನ, ಕಳಸಾ – ಬಂಡೂರಿ ವಿವಾದ, ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಪ್ರತಿಭಟನೆ, 108 ಆರೋಗ್ಯ ಸೇವೆ ಸಿಬ್ಬಂದಿ ಮುಷ್ಕರದ ವಿಷಯಗಳೂ ಚರ್ಚೆಗೆ ಬರುವ ಸಾಧ್ಯತೆ ಇದೆ.

ಮಾರ್ಚ್ 1ರಿಂದ 5ರ ವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗಳು ನಡೆಯಲಿವೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಉತ್ತರಿಸಲಿದ್ದಾರೆ.

ಈ ಬಾರಿ ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಲಿದೆ ಎಂಬ ವಿಶ್ವಾಸವನ್ನು ವಿಧಾನಸಭಾ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ವ್ಯಕ್ತಪಡಿಸಿದ್ದಾರೆ. ಎಲ್ಲ ಪಕ್ಷಗಳ ಶಾಸಕರು, ಸಚಿವರು ಪೂರ್ಣ ಪ್ರಮಾಣದಲ್ಲಿ ಕಲಾಪದಲ್ಲಿ ಭಾಗವಹಿಸಬೇಕು ಎಂದೂ ಅವರು ಆಶಿಸಿದ್ದಾರೆ.

ಮೂವರಿಗೆ ಮೊದಲ ಅಧಿವೇಶನ

ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ (ಹೆಬ್ಬಾಳ), ಶಿವನಗೌಡ ನಾಯಕ್‌ (ದೇವದುರ್ಗ) ಮತ್ತು ಕಾಂಗ್ರೆಸ್‌ನ ರಹೀಂ ಖಾನ್‌ (ಬೀದರ್‌) ಅವರಿಗೆ ಇದು ಮೊದಲ ಅಧಿವೇಶನ ಪರಿಷತ್‌ ಸದಸ್ಯರಾಗಿದ್ದ ನಾರಾಯಣ ಸ್ವಾಮಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ರಹೀಂ ಖಾನ್‌ ಮತ್ತು ಶಿವನಗೌಡ ನಾಯಕ್‌ ಅವರು ಈ ಹಿಂದೆ ಶಾಸಕರಾಗಿದ್ದವರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಗೆದ್ದ 25 ಸದಸ್ಯರಿಗೂ ಇದು ಮೊದಲ ಅಧಿವೇಶನ.

ಮ. 12ಕ್ಕೆ ರಾಜ್ಯಪಾಲರ ಭಾಷಣ

ವಜುಭಾಯಿ ವಾಲಾ ಅವರು ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಮಾ.5ರವರೆಗೆ ನಡೆಯಲಿರುವ ಅಧಿವೇಶನವು ಹೊಸ ವರ್ಷದಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ.

Write A Comment