ಕರ್ನಾಟಕ

ನಾಳೆ ಜನಿಸಲಿರುವ ಮಕ್ಕಳು ನಾಲ್ಕು ವರ್ಷಕ್ಕೊಮ್ಮೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗುತ್ತೆ

Pinterest LinkedIn Tumblr

janaಬೆಂಗಳೂರು: ಇಂದು ಜನಿಸಲಿರುವ ಮಕ್ಕಳು ನಾಲ್ಕು ವರ್ಷಕ್ಕೊಮ್ಮೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗುತ್ತದೆ. ಈ ಬಾರಿ ಫೆಬ್ರುವರಿ ತಿಂಗಳಲ್ಲಿ 29 ದಿನ ಬಂದಿದ್ದು, ಇದು ನಾಲ್ಕು ವರ್ಷಕ್ಕೊಮ್ಮೆ ಬರಲಿದೆ. ಈಗಾಗಲೇ ಫೆ.29ರಂದು ಹುಟ್ಟಿದವರಿಗೆ ಈ ಸಮಸ್ಯೆ ಕಂಡುಬರುತ್ತಿದೆ. ಹುಟ್ಟುಹಬ್ಬ ಆಚರಣೆಗಾಗಿ ಮಗು ಜನಿಸುವ ದಿನಾಂಕವನ್ನೇ ಬದಲಿಸಲು ಬಹುತೇಕ ತಾಯಂದಿರು ಮುಂದಾಗಿದ್ದಾರೆ. ಹೀಗಾಗಿ ಗರ್ಭಿಣಿಯರು ಕನಿಷ್ಠ ಒಂದು ದಿನ ಮುಂದೂಡುವಂತೆ ತಮ್ಮ ತಮ್ಮ ವೈದ್ಯರ ಬಳಿ ದುಂಬಾಲು ಬೀಳುತ್ತಿದ್ದಾರೆ. ಒಂದು ವೇಳೆ ಇಂದು ಮಗುವಿಗೆ ಜನ್ಮ ನೀಡಿದರೆ, ಹುಟ್ಟುಹಬ್ಬ ಆಚರಿಸಲು 2020ರವರೆಗೂ ಕಾಯಬೇಕು ಎಂಬ ಚಿಂತೆ ಕಾಡುತ್ತಿದೆ.

ಇಲ್ಲದಿದ್ದರೆ ಒಂದು ದಿನ ಹಿಂದು ಮುಂದು ಮಾಡಿ ಅಂದರೆ, ಫೆ.28 ಅಥವಾ ಮಾ.1ರಂದು ಆಚರಿಸಬೇಕು. ಈಗಾಗಲೇ ಫೆ.29ರಂದು ಜನಿಸಿರುವವರು ಇದೇ ರೀತಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನಿಸಿದ ದಿನದಂದೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು. ಹಿಂದು ಮುಂದು ಮಾಡುವುದು ಸರಿಯಲ್ಲ ಎಂಬುದು ಬಹುತೇಕ ತಾಯಂದಿರು ಮತ್ತು ಆ ದಿನ ಜನಿಸಿದವರ ಅಭಿಮತ. ನಾಳೆಯೇ ಪ್ರಸೂತಿಯ ದಿನಾಂಕವಿದ್ದರೂ ಹಿಂದೆ ಮುಂದೆಯಾಗುವ ಸಾಧ್ಯತೆ ಇದೆ. ಕೆಲವೊಂದು ಅನಿವಾರ್ಯ ಸಂದರ್ಭ ಹೊರತುಪಡಿಸಿ ಹೆರಿಗೆ ಮುಂದೂಡಲು ಸಾಧ್ಯವಿಲ್ಲ ಎಂಬುದು ಪ್ರಸೂತಿ ತಜ್ಞರ ಅಭಿಪ್ರಾಯ.

ಸಹಜ ಹೆರಿಗೆಗಳಲ್ಲಿ ಮುಂದೂಡುವ ಪ್ರಸಂಗ ಬರುವುದಿಲ್ಲ. ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಾಗ ಮುಂದೂಡಲು ಸಾಧ್ಯವಿದೆ. ಕನಿಷ್ಠ 38 ವಾರಗಳು ಪೂರ್ಣವಾಗಿದ್ದಾಗ ಗರ್ಭಿಣಿಗೆ ಯಾವುದೇ ತೊಂದರೆ ಇಲ್ಲದಿದ್ದರೆ ಒಂದು ದಿನ ಮುಂದೂಡುವ, ಇಲ್ಲವೆ ಒಂದು ದಿನ ಮುಂಚಿತವಾಗಿ ಸಿಸೆರಿಯನ್ ಮೂಲಕ ಹೆರಿಗೆ ಮಾಡಿಸಲು ಅವಕಾಶವಿದೆ. ಈ ಅವಕಾಶ ಸಹಜ ಹೆರಿಗೆಗಳಲ್ಲಿ ಕಡಿಮೆ ಇದೆ.

Write A Comment