ಕರ್ನಾಟಕ

ಸಾಹಿತ್ಯದರಮನೆಯ ಅರಸ ಯಾರು..? : ಮಾರ್ಚ್ 2 ರಂದು ಫಲಿತಾಂಶ

Pinterest LinkedIn Tumblr

sahiತೀವ್ರ ಕುತೂಹಲ ಕೆರಳಿಸಿದ್ದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಡೆಡ ಮತದಾನ ಕೆಲವೊಂದು ಸಣ್ಣ-ಪುಟ್ಟ ಘಟನೆ ಹೊರತುಪಡಿಸಿದರೆ, ಇಂದು ಶಾಂತಿಯುತವಾಗಿತ್ತು. ಜಿಲ್ಲಾ ಘಟಕಗಳ ಫಲಿತಾಂಶ ರಾತ್ರಿ ವೇಳೆಗೆ ಹೊರ ಬಿದ್ದರೆ, ರಾಜ್ಯಾಧ್ಯಕ್ಷ ಸ್ಥಾನದ ಫಲಿತಾಂಶ ಮಾರ್ಚ್ ಎರಡರಂದು ಪ್ರಕಟವಾಗಲಿದೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ಇಂದು ಮತದಾನ ನಡೆದರೂ ಮಾರ್ಚ್ ಎರಡರ ಬೆಳಗ್ಗೆ 11ರವರೆಗೂ ಅಂಚೆ ಮತಪತ್ರಗಳನ್ನು ಸ್ವೀಕರಿಸಲಾಗುತ್ತದೆ.

ಅಂದು ಮತ ಎಣಿಕೆ ನಡೆದು ಅಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕಗಳಿಗೆ ಅವಿರೋಧ ಆಯ್ಕೆಯಾಗಿದೆ.

ಪ್ರತಿಭಟನೆ:ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮತಗಟ್ಟೆಯಲ್ಲಿನ ಮತಪೆಟ್ಟಿಗೆಗಳಿಗೆ ಸೀಲ್ ಹಾಕಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಘಟನೆ ಮದು ಬೆಳಗ್ಗೆ ಜರುಗಿತು. ಕೆಲವು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಚುನಾವಣಾಧಿಕಾರಿ ವಿರುದ್ಧ ಮತ ಪೆಟ್ಟಿಗೆ ಸೀಲ್ ಹಾಕಿಲ್ಲ ಎಂಬ ಆರೋಪ ಮಾಡಿದರು. ಇಲ್ಲಿ 21 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೆಂಗಳೂರು ಸೇರಿದಂತೆ ಎಲ್ಲಾ ಮತಗಟ್ಟೆಗಳು ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಇಂದು ಬೆಳಗ್ಗೆ ಎಂಟು ಗಂಟೆಗೆ ಹೋಬಳಿ , ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳು ಸೇರಿದಂತೆ 292 ಮತಗಟ್ಟೆಗಳಲ್ಲಿ ಮತದಾನ ಪ್ರಾರಂಭಗೊಂಡಿತು. ಸಂಜೆ ನಾಲ್ಕು ಗಂಟೆಯವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮನುಬಳಿಗಾರ್, ಪ್ರೊ.ಬಿ.ಜಯಪ್ರಕಾಶ್‌ಗೌಡ, ಬಿ.ಎಂ.ಪಟೇಲ್‌ಪಾಂಡು, ಸಂಗಮೇಶಬಾದವಾಡಗಿ, ಡಾ.ಎಚ್.ಎಲ್. ಜನಾರ್ಧನ್ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳಿದ್ದಾರೆ. ಹೊರರಾಜ್ಯ ಹಾಗೂ ಹೊರದೇಶಗಳ 1,774 ಮತದಾರರು ಸೇರಿದಂತೆ ಒಟ್ಟು 1.89 ಲಕ್ಷ ಮತದಾರರಿದ್ದು, ಬೆಂಗಳೂರು ನಗರ ಒಂದರಲ್ಲೆ 26 ಸಾವಿರ ಮತದಾರರಿದ್ದರು. ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಎಂ.ಪ್ರಕಾಶಮೂರ್ತಿ, ಮಾಯಣ್ಣ, ನೇ.ಭ.ರಾಮಲಿಂಗಶೆಟ್ಟಿ, ಎಸ್.ಪಿನಾಕಪಾಣಿ ಸೇರಿದಂತೆ 13 ಅಭ್ಯರ್ಥಿಗಳು ನಗರ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಐದು ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಳಿ ಬಣ್ಣದ ಮತಪತ್ರ ನೀಡಿದ್ದರೆ, ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಗುಲಾಬಿ ಬಣ್ಣದ ಮತಪತ್ರ ನೀಡಲಾಗಿತ್ತು. 1,460 ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ತೊಡಗಿದ್ದರು.

Write A Comment