ರಾಷ್ಟ್ರೀಯ

ನನ್ನ ಬಗ್ಗೆ ಚಿಂತಿಸಬೇಡ, ದೇಶಕ್ಕಾಗಿ ದುಡಿ: ಮೋದಿ ತಾಯಿ

Pinterest LinkedIn Tumblr

Narendra-Modi-with-his-mo-011-e1456658059801ದೆಹಲಿ: ನನ್ನ ಆರೋಗ್ಯದ ಬಗ್ಗೆ ಚಿಂತಿಸಬೇಡ ದೇಶಕ್ಕಾಗಿ ದುಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಾಯಿ ಹೀರಾಬೆನ್ ಸಲಹೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಪ್ರಧಾನಿಯವರ ತಾಯಿ ಉಸಿರಾಟದ ತೊಂದರೆಯಿಂದಾಗಿ ಅಸ್ಪತ್ರೆಗೆ ದಾಖಲಾಗಿದ್ದು, ಇದೀಗ ಆರೋಗ್ಯವಾಗಿದ್ದಾರೆ. ಈ ಹಿನ್ನಲೆಯಲ್ಲಿ ತಾಯಿ ಹೀರಾಬೆನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಪತ್ರಕರ್ತರೊಬ್ಬರು ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ತಾಯಿಯ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಪ್ರಧಾನಿ, “ನನ್ನ ಬಗ್ಗೆ ಯಾವುದೇ ಚಿಂತೆ ಮಾಡಬೇಡ. ನಿನ್ನ ಕೆಲಸದತ್ತ ಗಮನಕೊಡು ಮತ್ತು ದೇಶಕ್ಕಾಗಿ ದುಡಿ” ಎಂದು ತಾಯಿ ಸಲಹೆ ನೀಡಿದ್ದಾಗಿ ಮೋದಿ ತಿಳಿಸಿದ್ದಾರೆ.

Write A Comment