ಕರ್ನಾಟಕ

ಸಿಎಂ ಸಿದ್ದು ಹೇಳಿಕೆ ಕಟ್ಟು ಕಥೆ , ತನಿಕೆಯಾದರೆ ಬಂಡವಾಳ ಬಯಲು: ಕುಮಾರ ಸ್ವಾಮಿ

Pinterest LinkedIn Tumblr

kumarಬೆಂಗಳೂರು, ಫೆ.26- ಮುಖ್ಯಮಂತ್ರಿ ಸಿದ್ದ ರಾಮಯ್ಯ ಧರಿಸಿದ್ದ ದುಬಾರಿ ವಾಚ್ ಬಗ್ಗೆ ಸಿಬಿಐ ನಂತಹ ದೊಡ್ಡ ಮಟ್ಟದಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬಾರಿ ವಾಚ್ ಬಗ್ಗೆ ಆತ್ಮೀಯ ಸ್ನೇಹಿತರೊಬ್ಬರು ಗಿಫ್ಟ್ ಕೊಟ್ಟಿರುವುದಾಗಿ ಸಿಎಂ ನೀಡಿರುವ ಹೇಳಿಕೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಕಟ್ಟುಕತೆಯಾಗಿದೆ ಎನಿಸುತ್ತದೆ ಎಂದು ಹೇಳಿದರು. ಇದು ಕಳುವಾದ ವಾಚೇ ಅಥವಾ ಬೇರೆಯದೆ ಎಂಬುದು ತನಿಖೆಯಿಂದ ಹೊರಬರಬೇಕು, ಕಳುವಾಗಿದ್ದ ವಾಚನ್ನು ಮುಖ್ಯಮಂತ್ರಿ ಧರಿಸಿದ್ದರು ಎಂಬ ಆಪಾದನೆ ಮಾಡುತ್ತಿಲ್ಲ. ವಾಚ್‌ನ ಬಗ್ಗೆ ಇರುವ ಸಂದೇಹ ಬಗೆಹರಿಯಲು ತನಿಖೆಯಾಗಬೇಕು ಎಂದರು.

ಜನವರಿ 24 ರಂದು ಹುಣಸೂರಿನ ಕಾರ್ಯಕ್ರಮದಲ್ಲಿ ಸಮಾಜವಾದಿ ಸಿದ್ಧಾಂತಗಳ ಹಿನ್ನೆಲೆ ಹಾಗೂ ಲೋಹಿಯಾವಾದಿಯಾಗಿರುವ ಸಿದ್ದರಾಮಯ್ಯ ಅವರು ದುಬಾರಿ ಮೌಲ್ಯದ ಕನ್ನಡಕ ಮತ್ತು ವಾಚ್ ಧರಿಸಿದ್ದಾರೆ ಎಂದು ಆರೋಪಿಸಿದ್ದೆ. ಆದರೆ ಸುತ್ತೂರು ಜಾತ್ರೆ ಸಂದರ್ಭದಲ್ಲಿ ಕನ್ನಡಕ 50 ಸಾವಿರ, ವಾಚ್ 20 ಲಕ್ಷ ರೂ.ಗೆ ಮಾರುತ್ತೇನೆ ಕೊಂಡುಕೊಳ್ಳಿ ಎಂದು ಹೇಳಿಕೆ ನೀಡಿದ್ದರು. ಇದಾದ ಮೇಲೆ ಮುಖ್ಯಮಂತ್ರಿ ಸಚಿವಾಲಯ ಯಾರು ಕೊಟ್ಟರು, ಎಷ್ಟು ಬೆಲೆಯ ವಾಚ್ ಎಂದು ಮಾಹಿತಿ ನೀಡಿರಲಿಲ್ಲ. ಆದರೂ ಮುಖ್ಯಮಂತ್ರಿ ಸುಳ್ಳುಗಳ ಸರಮಾಲೆ ಹೆಣೆಯಲು —- ಅವರೇ ತೋಡಿಕೊಂಡ ಬ——- ಬಿದ್ದಿದ್ದಾರೆ ಎಂದು ಟೀಕಿಸಿದರು.

ತಾವು ಮುಖ್ಯಮಂತ್ರಿಗೆ 2 ಕೋಟಿ ರೂ. ಮೌಲ್ಯದ ವಾಚ್ ಕಟ್ಟಿಕೊಳ್ಳಬೇಡಿ ಎನ್ನಲಿಲ್ಲ. ಸಮಾಜವಾದಿಯಲ್ಲ ಮಜವಾದಿ ಎಂಬುದನ್ನು ಹೇಳಿಬಿಡಿ ಎಂದಿದ್ದೆ. ತಿಂಗಳು ಕಳೆದರೂ ಮುಖ್ಯಮಂತ್ರಿ ಆತ್ಮೀಯ ಸ್ನೇಹಿತರು ಗಿಫ್ಟ್ ನೀಡಿದ್ದರ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ವಿಷಯ ಪ್ರಸ್ತಾಪವಾದ ಮರುದಿನವೇ ನೀಡಬೇಕಿತ್ತು. ಆದರೆ ಪ್ರಮಾಣ ಪತ್ರ ಕೊಟ್ಟಿದ್ದಾರಂತೆ ಎಂದು ವ್ಯಂಗ್ಯವಾಡಿದರು. 1983ರಲ್ಲಿ ಸಿದ್ದರಾಮಯ್ಯ ಮೈಸೂರಿನಲ್ಲಿದ್ದಾರೆ. ಅವರ ಸ್ನೇಹಿತ ಡಾ.ಗಿರೀಶ್‌ವರ್ಮಾ ಅವರು ದಾವಣಗೆರೆಯಲ್ಲಿ ಎಂಬಿಬಿಎಸ್ ಮಾಡುತ್ತಿದ್ದರು ಎಂಬ ರೀತಿ ಹೇಳಿಕೆ ನೀಡಿದ್ದಾರೆ. ಅವರು ನಿಜವಾಗಿ ಸ್ನೇಹಿತರಾಗಿದ್ದರೆ ಎಂಬ ಅನುಮಾನ ಮೂಡುತ್ತದೆ. ತಾವು ಮುಖ್ಯಮಂತ್ರಿ ಧರಿಸಿದ್ದ ವಾಚ್ ಫೋಟೋ ಬಿಡುಗಡೆ ಮಾಡಿದ ನಂತರ ಸುದ್ದಿವಾಹಿನಿಗಳಲ್ಲಿ ವಾಚ್ ಗಮನಿಸಿದ ಸುಧಾಕರ್ ಶೆಟ್ಟಿ ಎಂಬುವರು ಆ ವಾಚ್ ತಮ್ಮ ವಾಚಾಗಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ತಮ್ಮನ್ನು ಸಂಪರ್ಕಿಸಲು ಯತ್ನಿಸಿದ್ದರು.

ಇದು ಕಳುವಾದ ವಾಚೇ ಅಥವಾ ಬೇರೆಯದೆ ಎಂಬುದು ತನಿಖೆಯಿಂದ ಹೊರಬರಬೇಕು, ಕಳುವಾಗಿದ್ದ ವಾಚನ್ನು ಮುಖ್ಯಮಂತ್ರಿ ಧರಿಸಿದ್ದರು ಎಂಬ ಆಪಾದನೆ ಮಾಡುತ್ತಿಲ್ಲ. ವಾಚ್‌ನ ಬಗ್ಗೆ ಇರುವ ಸಂದೇಹ ಬಗೆಹರಿಯಲು ತನಿಖೆಯಾಗಬೇಕು ಎಂದರು. ಜನವರಿ 24 ರಂದು ಹುಣಸೂರಿನ ಕಾರ್ಯಕ್ರಮದಲ್ಲಿ ಸಮಾಜವಾದಿ ಸಿದ್ಧಾಂತಗಳ ಹಿನ್ನೆಲೆ ಹಾಗೂ ಲೋಹಿಯಾವಾದಿಯಾಗಿರುವ ಸಿದ್ದರಾಮಯ್ಯ ಅವರು ದುಬಾರಿ ಮೌಲ್ಯದ ಕನ್ನಡಕ ಮತ್ತು ವಾಚ್ ಧರಿಸಿದ್ದಾರೆ ಎಂದು ಆರೋಪಿಸಿದ್ದೆ. ಆದರೆ ಸುತ್ತೂರು ಜಾತ್ರೆ ಸಂದರ್ಭದಲ್ಲಿ ಕನ್ನಡಕ 50 ಸಾವಿರ, ವಾಚ್ 20 ಲಕ್ಷ ರೂ.ಗೆ ಮಾರುತ್ತೇನೆ ಕೊಂಡುಕೊಳ್ಳಿ ಎಂದು ಸಿಎಂ ಹೇಳಿಕೆ ನೀಡಿದ್ದರು.

ಇದಾದ ಮೇಲೆ ಮುಖ್ಯಮಂತ್ರಿ ಸಚಿವಾಲಯ ಯಾರು ಕೊಟ್ಟರು, ಎಷ್ಟು ಬೆಲೆಯ ವಾಚ್ ಎಂದು ಮಾಹಿತಿ ನೀಡಿರಲಿಲ್ಲ. ಆದರೂ ಮುಖ್ಯಮಂತ್ರಿ ಸುಳ್ಳುಗಳ ಸರಮಾಲೆ ಹೆಣೆಯಲು ಹೋಗಿ ಅವರೇ ತೋಡಿಕೊಂಡ ಖೆಡ್ಡಕ್ಕೆ ಹಿತಿ ನೀಡಿಲ್ಲ. ವಿಷಯ ಪ್ರಸ್ತಾಪವಾದ ಮರುದಿನವೇ ನೀಡಬೇಕಿತ್ತು. ಆದರೆ ಪ್ರಮಾಣ ಪತ್ರ ಕೊಟ್ಟಿದ್ದಾರಂತೆ ಎಂದು ವ್ಯಂಗ್ಯವಾಡಿದರು. 1983ರಲ್ಲಿ ಸಿದ್ದರಾಮಯ್ಯ ಮೈಸೂರಿನಲ್ಲಿದ್ದಾರೆ. ಅವರ ಸ್ನೇಹಿತ ಡಾ.ಗಿರೀಶ್‌ವರ್ಮಾ ಅವರು ದಾವಣಗೆರೆಯಲ್ಲಿ ಎಂಬಿಬಿಎಸ್ ಮಾಡುತ್ತಿದ್ದರು ಎಂಬ ರೀತಿ ಹೇಳಿಕೆ ನೀಡಿದ್ದಾರೆ. ಅವರು ನಿಜವಾಗಿ ಸ್ನೇಹಿತರಾಗಿದ್ದರೆ ಎಂಬ ಅನುಮಾನ ಮೂಡುತ್ತದೆ. ತಾವು ಮುಖ್ಯಮಂತ್ರಿ ಧರಿಸಿದ್ದ ವಾಚ್ ಫೋಟೋ ಬಿಡುಗಡೆ ಮಾಡಿದ ನಂತರ ಸುದ್ದಿವಾಹಿನಿಗಳಲ್ಲಿ ವಾಚ್ ಗಮನಿಸಿದ ಸುಧಾಕರ್ ಶೆಟ್ಟಿ ಎಂಬುವರು ಆ ವಾಚ್ ತಮ್ಮ ವಾಚಾಗಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ತಮ್ಮನ್ನು ಸ್ನೇಹಿತರೊಬ್ಬರ ಮೂಲಕ ಸಂಪರ್ಕಿಸಲು ಯತ್ನಿಸಿದ್ದರು.

2 ದಿನದ ನಂತರ ಸುಧಾಕರ್‌ಶೆಟ್ಟಿ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ತಮ್ಮನ್ನು ತರಬೇಡಿ, ನಮಗೆ ಇಳಿವಯಸ್ಸಾಗಿದೆ ಎಂದಿದ್ದಾರೆ. ಆದರೂ ನಾವು ಹೆದರಬೇಡಿ ಎಂದು ಹೇಳಿದ್ದೇವೆ. ಸುಧಾಕರ್ ಶೆಟ್ಟಿ ಅವರು 2015ರ ಮೇ 7ರಂದು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿ ತಾವು ಕುವೈತ್‌ನಲ್ಲಿದ್ದಾಗ ಅಲ್ಲಿಂದ ತಂದಿದ್ದ ರೋಲೆಕ್ಸ್ ವಜ್ರಖಚಿತ ವಾಚ್, ವಜ್ರದ ಉಂಗುರ ಸೇರಿದಂತೆ ಆಭರಣಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಯಶೋಧ ಎಂಬ ಬ್ಯೂಟಿಶಿಯನ್, ಆನಂದ್ ಪೂಜಾರಿ ಎಂಬ ಚಾಲಕ, ಮಹಾಲಕ್ಷ್ಮಿ ಎಂಬ ಕೆಲಸದಾಕೆ ಮೂರು ಜನ ಬಿಟ್ಟರೆ ಬೇರೆ ಯಾರೂ ನಮ್ಮ ಮನೆಗೆ ಬಂದಿಲ್ಲ ಎಂದು ದೂರು ಕೊಟ್ಟಿದ್ದಾರೆ. ಒಂದು ದಿನ ಯಶೋಧ ಸುಧಾಕರ್ ಶೆಟ್ಟಿ ಮನೆಗೆ ಹೋಗಿ ಮಂಗಳೂರಿಗೆ ಹೋಗುವುದಾಗಿ ಹೇಳಿ ಕೆ.ಆರ್.ನಗರಕ್ಕೆ ಹೋದ ಬಗ್ಗೆ ಮಾಹಿತಿ ಇದೆ.

ಪೊಲೀಸ್ ಇಲಾಖೆ ಕಳುವಾದ ವಸ್ತುಗಳು ಸಿಕ್ಕಿದೆಯೋ, ಇಲ್ಲವೋ ಎಂಬ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ವಾಚ್ ವಿವಾದ ಉಂಟಾದ ನಂತರ ಮಾಡಲಾಗಿರುವ ದೂರವಾಣಿ ಕರೆಗಳ ಮಾಹಿತಿ ಪಡೆದು ತನಿಖೆ ನಡೆಸಿದರೆ ದೊಡ್ಡ ವೃತ್ತಾಂತ ಹೊರಬರುತ್ತದೆ. ಬಿಜೆಪಿಯವರು ಜಾರಿ ನಿರ್ದೇಶನಾಲಯದ ಮುಂದೆ ತೆಗೆದುಕೊಂಡು ಹೋಗಿದ್ದಾರೆ. ಸುಧಾಕರ್ ಶೆಟ್ಟಿ ವಾಚ್ ಖರೀದಿಸಿದ ರಸೀದಿ ಇದೆ ಎಂದು ಹೇಳಿದ್ದಾರೆ. ಈ ಎಲ್ಲದರ ಬಗ್ಗೆ ದೊಡ್ಡ ಮಟ್ಟದ ಸೂಕ್ತ ತನಿಖೆಯಾಗಬೇಕು ಎಂದರು. ಮುಖ್ಯಮಂತ್ರಿಯವರು ವಾಚ್‌ಗೆ ತೆರಿಗೆ ಕಟ್ಟಿದ ಮೇಲೆ ಸಂಪುಟ ಸಭಾಂಗಣದಲ್ಲಿ ಅದನ್ನು ಇಡಬೇಕಾಗಿಲ್ಲ ಎಂದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಬಿಜಾಪುರದ ಕಾರ್ಯಕ್ರಮವೊಂದರಲ್ಲಿ ತಮಗೆ ಬೆಳ್ಳಿಯ ಆಸನ (ಛೇರ್) ನೀಡಿದ್ದರು. ಅದನ್ನು ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಾಗ ನೀಡಲಾಯಿತು ಎಂದು ವಿವರಿಸಿದರು.

Write A Comment