ಕರ್ನಾಟಕ

ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ

Pinterest LinkedIn Tumblr

policeಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ರೌಡಿಗಳ ಹಾವಳಿ ಮತ್ತು ಸುಲಿಗೆ ಪ್ರಕರಣಗಳು ಕಡಿವಾಣ ಹಾಕಲು ನಗರ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ನಗರದ ಪೂರ್ವ, ಈಶಾನ್ಯ ಮತ್ತು ಆಗ್ನೇಯ ಭಾಗದ ಸುಮಾರು 300 ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

ನಗರದಲ್ಲಿ ಪದೇ ಕೇಳಿಬರುತ್ತಿರುವ ಹಪ್ತಾ ವಸೂಲಿ ಪ್ರಕರಣ, ಅಕ್ರಮ ಮಾರಕಾಸ್ತ್ರಗಳನ್ನು ಹೊಂದಿರುವ ಹಾಗೂ ನಡೆಯುತ್ತಿರುವ ಕೊಲೆ ಪ್ರಕರಣದಲ್ಲಿ ರೌಡಿ ಶೀಟರ್ ಗಳು ಮತ್ತು ಮಾಜಿ ರೌಡಿಗಳ ಕೈವಾಡವಿದೆ ಎಂದು ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ, ಐಜಿ ಹರಿಶೇಖರನ್ ಹಾಗೂ ಆಯಾ ವಲಯದ ಡಿಸಿಪಿಗಳ ನೇತೃತ್ವದ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಇನ್ನು ಬೆಳಗ್ಗೆಯಿಂದ ರೌಡಿಗಳ ಮನೆ ಪರಿಶೀಲನೆ ನಡೆಯುತ್ತಿದ್ದು, ಹಲವು ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Write A Comment