ಕರ್ನಾಟಕ

ಮಾಜಿ ಹಿರಿಯ ಕ್ರಿಕೆಟಿಗ ಬಿಕೆ ಗರುಡಾಚಾರ್ ಬೆಂಗಳೂರಿನಲ್ಲಿ ನಿಧನ

Pinterest LinkedIn Tumblr

garudachar-600

ಬೆಂಗಳೂರು: ಭಾರತದ ಅತ್ಯಂತ ಹಿರಿಯ ಕ್ರಿಕೆಟಿಗ ಬಿಕೆ ಗರುಡಾಚಾರ್ ಅವರು ಶುಕ್ರವಾರ ನಿಧನರಾಗಿದ್ದು, ಅವರಿಗೆ 99 ವರ್ಷ ವಯಸ್ಸಾಗಿತ್ತು.

ಭಾರತದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ಆಗಿನ ಮೈಸೂರು ಕ್ರಿಕೆಟ್ ತಂಡದ ನಾಯಕರಾಗಿದ್ದ ಬಿಕೆ ಗರುಡಾಚಾರ್ ಅವರು ಶುಕ್ರವಾರ ನಿಧನರಾಗಿದ್ದು, ಇಂದು ಮಾಧ್ಯಮಗಳಿಗೆ ಮಾಹಿತಿ ತಿಳಿದಿದೆ. ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಹಿರಿಯ ಕ್ರಿಕೆಟಿಗರೆಂದು ಖ್ಯಾತಿ ಗಳಿಸಿದ್ದ ಗರುಡಾಚಾರ್ ಅವರು, 1935 ರಿಂದ 1946 ವರೆಗಿನ ಅವಧಿಯಲ್ಲಿ ಒಟ್ಟು 27 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ್ದು, ಬಲಗೈ ಬ್ಯಾಟ್ಸಮನ್ ಆಗಿದ್ದ ಅವರು ಒಟ್ಟು 29.63 ಸರಾಸರಿಯಲ್ಲಿ 1126 ರನ್ ಗಳನ್ನು ಗಳಿಸಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಗರುಡಾಚಾರ್ ಅವರು ಜನವರಿ 13 1917ರಂದು ಜನಿಸಿದ್ದು, ಬನಾರಸ್ ವಿವಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಮೈಸೂರು ಕ್ರಿಕೆಟ್ ತಂಡವನ್ನು ಸೇರಿಕೊಳ್ಳುವ ಮುನ್ನ ಗರುಡಾಚಾರ್ ಅವರು 1940ರಲ್ಲಿ ಯುನೈಟೆಡ್ ಪ್ರಾವಿನೆನ್ಸ್ ಮತ್ತು ಬಾಂಬೆ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ್ದರು.

ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ನಲ್ಲಿಯೂ ಸಾಧನೆ ಮಾಡಿದ್ದ ಗರುಡಾಚಾರ್ ಅವರು ಒಟ್ಟು 100 ವಿಕೆಟ್ ಗಳನ್ನು ಕಬಳಿಸಿದ್ದರು. ಇದರಲ್ಲಿ ಏಳು ಬಾರಿ 5 ವಿಕೆಟ್ ಮತ್ತು 3 ಬಾರಿ 10ವಿಕೆಟ್ ಪಡೆದ ಸಾಧನೆ ಮಾಡಿದ್ದರು. 1946ರಲ್ಲಿ ನಡೆದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಇವರು ಹೋಲ್ಕಾರ್ ತಂಡದ ವಿರುದ್ಧ ತಮ್ಮ ವೃತ್ತಿ ಜೀವನದ ಏಕೈಕ ಶತಕವನ್ನು ಭಾರಿಸಿದ್ದರು.

Write A Comment