ಕರ್ನಾಟಕ

ಮತ್ತೆ ಗುಡುಗಿದ ಕಾಗೋಡು: ವಾಚ್ ಪ್ರಕರಣ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ

Pinterest LinkedIn Tumblr

Kagodu Thimmappa

ಬೆಂಗಳೂರು: ಕೆಳಹಂತದಿಂದ ವಿಧಾನಸೌಧದವರೆಗೆ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಯಾಗಬೇಕೆಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆಶಯ ವ್ಯಕ್ತಪಡಿಸಿದ್ದು, ಕೈಮುಗಿದು ಕೇಳ್ತೀನಿ ವಾಚ್ ನಂತಹ ಪ್ರಕರಣಗಳ ಕಿತ್ತಾಟ ಬಿಟ್ಟು, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನರ ಸಮಸ್ಯೆ ಬಗ್ಗೆ ಚರ್ಚಿಸಿ. ಕುಡಿಯುವ ನೀರು ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಲಿ ಎಂದು ವಿನಂತಿಸಿದರು.

ಫೆ.29ರಿಂದ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲರ ವಜುಭಾಯಿ ವಾಲಾ ಅವರು 29ರಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ ಅಧಿವೇಶನದ 4 ವಿಧೇಯಕ ಅಂಗೀಕಾರಕ್ಕೆ ಬಾಕಿ ಇದೆ. 818 ಪ್ರಶ್ನೆಗಳು, 11 ಗಮನಸೆಳೆಯುವ ಸೂಚನೆಗಳು ಸ್ವೀಕೃತವಾಗಿದೆ ಎಂದು ಮಾಹಿತಿ ನೀಡಿದರು.

Write A Comment