ಕರ್ನಾಟಕ

ಬೇಸಿಗೆಯಲ್ಲಿ ಕರೆಂಟ್ ಕಟ್ ಇಲ್ಲ: ಇಂಧನ ಇಲಾಖೆ

Pinterest LinkedIn Tumblr

powercutಬೆಂಗಳೂರು: ಬೇಸಿಗೆ ಕಾಲದಲ್ಲಿ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂದು ಇಂಧನ ಇಲಾಖೆ ಹೇಳಿದೆ.

ಶರಾವತಿ ವಿದ್ಯುದಾಗಾರದಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ ಬಾರಿ ವಿದ್ಯುತ್ ಕೊರತೆ ಹೆಚ್ಚಾಗಿದ್ದು, ಲೋಡ್ ಶೆಡ್ಡಿಂಗ್ ಆಗಬಹುದು ಎಂದು ಆತಂಕ ಎದುರಾಗಿತ್ತು.

ಆದರೆ, ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ನ್ನು ಪೂರೈಸುತ್ತೇವೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಹೇಳಿದ್ದಾರೆ.

ಪ್ರಸ್ತುತ 9,359 ವಿದ್ಯುತ್ ಲಭ್ಯವಿದ್ದು, ಬೇಡಿಕೆ ಹೆಚ್ಚಿರುವ ಅವಧಿಯಲ್ಲಿ 800 ಮೆಗಾವ್ಯಾಟ್ ಕೊರತೆ ಇದೆ. ಆದರೆ ಈ ಕೊರತೆಯನ್ನು ನಾಗಾರ್ಜುನ ಜಲವಿದ್ಯುತ್ ಸಂಸ್ಥೆಯಿಂದ 300 ಮತ್ತು ವರಾಹಿಯಿಂದ 200 ಮೆಗಾವ್ಯಾಟ್ ವಿದ್ಯುತ್ ಪಡೆಯುವುದರ ಮೂಲಕ ನಿಭಾಯಿಸಲಾಗುತ್ತದೆ ಎಂದು ಅವರು ಸ್ಪಷ್ಟನೇ ನೀಡಿದ್ದಾರೆ.

ಸದ್ಯಕ್ಕೆ ವಿದ್ಯುತ್ ಪೂರೈಕೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಆರ್ ಟಿಪಿಎಸ್ ನ 5ನೇ ಘಟಕ ಸ್ಥಗಿತಗೊಂಡಿದ್ದು, 2ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

Write A Comment