ಕರ್ನಾಟಕ

ನಕಲಿ ಚಿನ್ನ ಅಡವಿಟ್ಟು ಸಿಕ್ಕಿಬಿದ್ದರು

Pinterest LinkedIn Tumblr

goldಬೆಂಗಳೂರು: ನಕಲಿ ಚಿನ್ನಾಭರಣ ಅಡವಿಡಲು ಯತ್ನಿಸಿದ ಖಾಸಗಿ ಹಣಕಾಸು ಸಂಸ್ಥೆ ನೌಕರ ಸೇರಿ ಮೂವರು, ಬ್ಯಾಂಕ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಗಳಾಗಿದ್ದಾರೆ.

ಬಸವೇಶ್ವರನಗರದ ವಿಷ್ಣು, ಈತನ ಸ್ನೇಹಿತ ತಮಿಳುನಾಡಿನ ರಾಜು, ಮತ್ತೊಬ್ಬ ಬಂಧಿತರು. ಹಾವನೂರು ವೃತ್ತ ಬಳಿಯ ಫೆಡರಲ್ ಬ್ಯಾಂಕ್ ಫೈನಾನ್ಶಿಯಲ್ ಸರ್ವೀಸ್ ಸಂಸ್ಥೆಯಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಕಮಲಾನಗರದ ಮಣಪ್ಪುರಂ ಗೋಲ್ಡ್ ಲೋನ್ ಸಂಸ್ಥೆಯಲ್ಲಿ ವಿಷ್ಣು ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಸ್ನೇಹಿತ ರಾಜು ಹೆಸರಿನಲ್ಲಿ 7 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 4 ಲಕ್ಷ ರೂ. ಪಡೆದಿದ್ದ. ನಂತರ 24 ಬಳೆಗಳನ್ನಿಟ್ಟು 30 ಲಕ್ಷ ರೂ. ಪಡೆದಿದ್ದ. ಮತ್ತೆ ನಕಲಿ ಚಿನ್ನದ ಬಳೆಗಳನ್ನು ಸ್ನೇಹಿತನ ಹೆಸರಿನಲ್ಲಿ ಅಡವಿ ಡಲು ಯತ್ನಿಸಿದ್ದ. ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದಾಗ ರೋಲ್ಡ್​ಗೋಲ್ಡ್ ಒಡವೆ ಎಂಬುದು ಗೊತ್ತಾಗಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ವಾಹನಗಳಿಗೆ ಬೆಂಕಿ ಹಚ್ಚಿದ್ದವ ಅರೆಸ್ಟ್

ಬೆಂಗಳೂರು: ಮನೆ ಮುಂದೆ ಮದ್ಯ ಸೇವಿಸುತ್ತಿದ್ದನ್ನು ಪ್ರಶ್ನಿಸಿದರೆಂಬ ಕಾರಣಕ್ಕೆ ಆಟೋ, ಬೈಕ್ ಹಾಗೂ ಕಾರಿಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ. ದಯಾನಂದನಗರದ ಸಾಗರ್ (21) ಬಂಧಿತ. ಫೆ.20ರ ತಡರಾತ್ರಿ ದಯಾನಂದನಗರ 3ನೇ ಕ್ರಾಸ್​ನ ರಸ್ತೆಯಲ್ಲಿ ಮದ್ಯಪಾನ ಮಾಡುತ್ತಿದ್ದ. ಇದನ್ನು ನೋಡಿದ ಮನೆ ಮಾಲೀಕ ರಾಜೇಶ್ ಬೈದು ಕಳುಹಿಸಿದ್ದ. ಪುನಃ ಅಲ್ಲಿಗೆ ಬಂದಿದ್ದ ಆರೋಪಿ ಅವರ ಆಟೋಗೆ ಬೆಂಕಿ ಹಚ್ಚಿದ್ದ. ಪಕ್ಕದಲ್ಲಿದ್ದ ಪಲ್ಸರ್ ಹಾಗೂ ಆಲ್ಟೋ ಕಾರಿಗೂ ಬೆಂಕಿ ವ್ಯಾಪಿಸಿ ಸುಟ್ಟು ಹೋಗಿದ್ದವು.

Write A Comment