ಅಂತರಾಷ್ಟ್ರೀಯ

ಕಾರ್ಖಾನೆಯಲ್ಲಿ ಬಂದೂಕುದಾರಿಯೊಬ್ಬನ ಯದ್ವಾತದ್ವಾ ಫೈರಿಂಗ್‍ಗೆ 7 ಮಂದಿ ಬಲಿ

Pinterest LinkedIn Tumblr

gunಲಾಸ್ ಏಂಜಲೀಸ್, ಫೆ.26- ಇಲ್ಲಿನ ಕನ್ಯಾಸ್ ಎಂಬ ಪುಟ್ಟ ಪಟ್ಟಣದಲ್ಲಿರುವ ಲಾನ್ ಮೋವರ್ ಕಾರ್ಖಾನೆಯಲ್ಲಿ ಪ್ರತ್ಯಕ್ಷನಾದ ಬಂದೂಕುಧಾರಿಯೊಬ್ಬ ಯದ್ವಾತದ್ವಾ ಗುಂಡು ಹಾರಿಸಿದಾಗ ಏಳು ಜನ ಸಾವನ್ನಪ್ಪಿ ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಕಾರ್ಖಾನೆ ಕೆಲಸಗಾರರೂ ಇದ್ದಾರೆ. ಏಕಾಏಕಿ ಗುಂಡು ಹಾರಿಸಿದ ವ್ಯಕ್ತಿ ಕೂಡ ಎಕ್ಸೀಲ್ ಕಂಪೆನಿಯ ನಿವೃತ್ತ ಉದ್ಯೋಗಿಯಾಗಿದ್ದು, ಭದ್ರತಾ ಸಿಬ್ಬಂದಿ ಬಂದೂಕುಧಾರಿ ಹಂತಕನನ್ನು ಹೊಡೆದುರುಳಿಸಿದ್ದಾರೆ ಎಂದು ಹರ್ವೆ ಕೌಂಟಿಯ ಷಿರೀಫ್ ಟಿ.ವಾಲ್ಟನ್ ಹೇಳಿದ್ದಾರೆ.

ಇದಕ್ಕೂ ಮುನ್ನ ಈ ವ್ಯಕ್ತಿ ಇನ್ನೊಂದು ಬೀದಿಯಲ್ಲಿ ದಾರಿಹೋಕನೊಬ್ಬನ ಕಾಲಿಗೆ ಗುಂಡು ಹೊಡೆದಿದ್ದಾನೆ. ಅದೇ ಪ್ರದೇಶದಲ್ಲಿ ಇನ್ನೊಬ್ಬ ವ್ಯಕ್ತಿಯತ್ತಲೂ ಗುಂಡು ಹಾರಿಸಿದ್ದಾನೆ. ನಂತರ ಲಾನ್‌ಮೋವರ್ ಕಂಪೆನಿಗೆ ನುಗ್ಗಿ ಇಲ್ಲಿ ಈ ಭೀಕರ ಹತ್ಯಾಕಾಂಡ ನಡೆಸಿದ್ದಾನೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಿಂದೆಂದೂ ಇಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲ ಎಂದು ಹೇಳಿರುವ ವಾಲ್ಟನ್, ಈ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ. ಇದೊಂದು ಇಡೀ ಪಟ್ಟಣದ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಪ್ರಕರಣ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

Write A Comment