ಕರ್ನಾಟಕ

ವಿಷ್ಣುವರ್ಧನ ಪಾರ್ಕ್​ಗೆ ಬೇಕಿದೆ ಕಾಯಕಲ್ಪ

Pinterest LinkedIn Tumblr

vishnuಬೆಂಗಳೂರು: ನಗರದ ಪ್ರತಿಷ್ಠಿತ ಬಡಾವಣೆ ಜಯನಗರದ 4ನೇ ಟಿ ಬ್ಲಾಕ್​ನಲ್ಲಿರುವ ಡಾ. ವಿಷ್ಣುವರ್ಧನ ವಿಶ್ರಾಂತಿವನದ ಬಳಿ ನಿರ್ವಿುಸಿರುವ ಸಾರ್ವಜನಿಕರ ಶೌಚಗೃಹ ನಿರ್ವಹಣೆ ಕೊರತೆ ಕಾರಣದಿಂದ ಬೀಗ ಹಾಕಲಾಗಿದೆ. ಇದರಿಂದಾಗಿ ವಾಯುವಿಹಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ನಿರ್ವಹಣೆ ಕೊರತೆಯಿಂದ ಶೌಚಗೃಹ ಸೇರಿ ಉದ್ಯಾನದ ಪರಿಸರವೂ ಹಾಳಾಗಿದೆ. ಸಾರ್ವಜನಿಕರು ಉದ್ಯಾನಕ್ಕೆ ಬರಲು ಹಿಂಜರಿಯುವ ಸ್ಥಿತಿ ನಿರ್ವಣವಾಗಿದೆ. ಇಲ್ಲಿನ ಪಕ್ಷಿಗಳು ಮಾಡುವ ಗಲೀಜನ್ನು ಸ್ವಚ್ಛಗೊಳಿಸುವ ಕೆಲಸ ಆಗಿಲ್ಲ. ಪರಿಣಾಮವಾಗಿ ನಡಿಗೆ ಪಥ, ಕಲ್ಲು ಬೆಂಚುಗಳು ಸೇರಿ ಇಡೀ ಉದ್ಯಾನ ಸ್ವಚ್ಛತೆ ಕೊರತೆ ಎದುರಿಸುತ್ತಿದೆ. ಕುಳಿತುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವಾಗ ವಿಶ್ರಾಂತಿವನ ಎಂದು ಕರೆಯುವುದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮಧುಮೇಹಿಗಳಿಗೆ ನರಕಯಾತನೆ: ಸಾಮಾನ್ಯವಾಗಿ ಮಧುಮೇಹಿಗಳಿಗೆ ವಾಯುವಿಹಾರ ರಾಮಬಾಣವಿದ್ದಂತೆ. ಆದರೆ, ಇಲ್ಲಿ ವಾಯುವಿಹಾರಕ್ಕೆ ಬರುವ ಮಧುಮೇಹಿಗಳು ಮೂತ್ರವಿಸರ್ಜನೆಗೆ ಪರದಾಡುವ ಸ್ಥಿತಿಯಿದೆ. ಶೌಚಗೃಹ ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಭಿವೃದ್ಧಿಪಡಿಸುವಾಗ ಇರುವ ಉತ್ಸಾಹ ನಿರ್ವಹಣೆಯಲ್ಲಿ ಇಲ್ಲವಾಗಿದೆ. ಇದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂಬುದು ಸ್ಥಳೀಯರ ಆಕ್ರೋಶದ ನುಡಿಗಳಾಗಿವೆ.

ತಡೆಗೋಡೆಗಳೇ ಮೂತ್ರಾಲಯ: ಉದ್ಯಾನದ ಕಾಂಪೌಂಡ್ ಸುತ್ತಲೂ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಉದ್ಯಾನದ ಪರಿಸರ ಹಾಳಾಗುತ್ತಿದೆ. ಜತೆಗೆ ಮಹಿಳೆಯರು ಮುಜುಗರ ಪಡುವಂತಾಗಿದೆ.

ಜಾಹಿರಾತು ಮಾಫಿಯಾ: ನಿರ್ವಹಣೆ ಕಾಣದ ಪಾರ್ಕ್​ನ ಸುತ್ತಲೂ ಹುಟ್ಟುಹಬ್ಬ, ಸಂಭ್ರಮಾಚರಣೆಯ ತರಹೇವಾರಿ ಅನಧಿಕೃತ ಜಾಹಿರಾತು ಫಲಕಗಳು ರಾರಾಜಿಸುತ್ತಿವೆ. ಇದರಿಂದ ಉದ್ಯಾನದ ಅಂದಕ್ಕೂ ಧಕ್ಕೆಯುಂಟಾಗಿದೆ. ಇಲ್ಲಿ ಪ್ರೇಮಿಗಳ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಪೊಲೀಸರ ಗಸ್ತು ಇಲ್ಲದಿರುವುದರಿಂದ ಇಂಥ ಕೃತ್ಯಗಳಿಗೆ ಕಡಿವಾಣವಿಲ್ಲದಂತಾಗಿದೆ ಎಂದು ವಾಯುವಿಹಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ದಿವಾಕರ್, ಜಯನಗರ 4ನೇ ಟಿ ಬ್ಲಾಕ್ ನಿವಾಸಿ

ಸಂಸದರ ನಿಧಿಯಿಂದ ನಿರ್ವಣಗೊಂಡಿರುವ ಶೌಚಗೃಹಕ್ಕೆ ನಿರ್ವಹಣೆ ಕೊರತೆ ಕಾಡುತ್ತಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ.

| ಬಿ.ಕೆ. ವೇಣುಗೋಪಾಲ್ ಸ್ಥಳೀಯ ನಿವಾಸಿ

ಇಲ್ಲಿನ ಬೆಂಚ್​ಗಳ ಮೇಲೆ ಪಕ್ಷಿಗಳು ಮಾಡುವ ಗಲೀಜು ಸ್ವಚ್ಛಗೊಳಿಸುವ ಕೆಲಸವೂ ಆಗುತ್ತಿಲ್ಲ. ಇದರಿಂದ ಪಾರ್ಕ್​ಗೆ ಬರುವವರು ಕುಳಿತುಕೊಳ್ಳಲು ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ನೀಡಬೇಕು.

| ರಾಧಾಕೃಷ್ಣ ರೆಡ್ಡಿ

ಸ್ಥಳೀಯ ನಿವಾಸಿ

ಪಾದಚಾರಿ ಮಾರ್ಗದಲ್ಲಿ ಅಳವಡಿಸಿರá-ವ ಕಲ್ಲುಗಳು ಮೇಲೆದ್ದು, ಓಡಾಡಲು ತೊಂದರೆಯಾಗಿದೆ. ಹಲವು ವೇಳೆ ಎಡವಿ ಗಾಯಗೊಂಡ ನಿದರ್ಶನಗಳಿವೆ.

| ಮಜರ್ ಜಯನಗರ, 4ನೇ ಟಿ ಬ್ಲಾಕ್ ನಿವಾಸಿ

Write A Comment