ಕರ್ನಾಟಕ

ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಾಂಕಿತ

Pinterest LinkedIn Tumblr

baಬೆಂಗಳೂರು, ಫೆ.25- ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ವೀರ ಸಂಗೊಳ್ಳಿ ರಾಯಣ್ಣನ ಹೆಸರು ಅಜರಾಮರವಾಗಿರಬೇಕೆಂಬ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ನಿರ್ಧರಿಸಲಾಗಿತ್ತು. ಅದರಂತೆ ತಡವಾದರೂ ಈಗ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಇನ್ನೂ ನಾಮಫಲಕ ಅಳವಡಿಸದೆ ಇದ್ದರೂ ನಿಲ್ದಾಣದೊಳಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ರಾರಾಜಿಸುತ್ತಿದೆ.

ಟಿಕೆಟ್‌ನಲ್ಲಿ ಈಗ ಕೆ.ಎಸ್.ಆರ್. (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ನಿಲ್ದಾಣ ಎಂದು ಮುದ್ರಿತವಾಗುತ್ತಿದೆ. ಇದಲ್ಲದೆ, ಆನ್‌ಲೈನ್ ಬುಕ್ಕಿಂಗ್‌ನಲ್ಲೂ ಬೆಂಗಳೂರಿಗೆ ಬರಬೇಕಾದರೆ ಇದೇ ಹೆಸರನ್ನೇ ನೊಂದಾಯಿಸಬೇಕಾಗುತ್ತದೆ.  ಇಂದು ಕೇಂದ್ರ ಸಚಿವ ಸುರೇಶ್‌ಪ್ರಭು ಅವರು ರೈಲ್ವೆ ಬಜೆಟ್ ಮಂಡಿಸುತ್ತಿರುವ ಸಂದರ್ಭದಲ್ಲೇ ಕಳೆದ ಎರಡು ದಿನಗಳಿಂದ ನೈಋತ್ಯ ರೈಲ್ವೆ ಅಧಿಕಾರಿಗಳು ಸದ್ದುಗದ್ದಲವಿಲ್ಲದೆ ಸಂಗೊಳ್ಳಿ ರಾಯಣ್ಣನ ಹೆಸರನ್ನು ನಾಮಫಲಕಗಳಿಗೆ ಬರೆಸುತ್ತಿದ್ದಾರೆ.

ಇದು ಕನ್ನಡಿಗರಿಗೆ ಹೆಮ್ಮೆ ತರುವಂತಹ ವಿಷಯವಾಗಿದ್ದು, ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ ಎಂದು ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

Write A Comment