ಕರ್ನಾಟಕ

ಇ-ಶೌಚಾಲಯ ಮೊಬೈಲ್ ಆಪ್ ಬಿಡುಗಡೆ

Pinterest LinkedIn Tumblr

eಬೆಂಗಳೂರು, ಫೆ.24-ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಇ-ಶೌಚಾಲಯ ಸ್ಥಾಪಿಸಿರುವುದಾಗಿ ಮೇಯರ್ ಮಂಜುನಾಥ್‌ರೆಡ್ಡಿ ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 80 ಸ್ಥಳಗಳಲ್ಲಿ ಇ-ಶೌಚಾಲಯಗಳನ್ನು ಅಳವಡಿಸಲಾಗಿದ್ದು, ಮೊಬೈಲ್ ಆಪ್ ಮೂಲಕ ಇವುಗಳ ಬಗ್ಗೆ ವಿವರಗಳನ್ನು ಪಡೆದುಕೊಳ್ಳ ಬಹುದು ಎಂದು ಅವರು ತಿಳಿಸಿದರು.

ನಗರದಲ್ಲಿ ಸ್ವಚ್ಛತೆ ಇಲ್ಲವೆಂದು ಹಲವಾರು ಬಾರಿ ಪ್ರತಿಭಟನೆ ಗಳು ನಡೆದಿದ್ದು, ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಇ-ಶೌಚಾಲಯ ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಇ-ಶೌಚಾಲಯಗಳಿಗೆ ಸಂಬಂಧಿಸಿದ ಮೊಬೈಲ್ ಆಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾರ್ವಜನಿಕರು ಈ ಮೊಬೈಲ್ ಅಳವಡಿಸಿಕೊಳ್ಳುವುದರಿಂದ ಗೂಗಲ್ ನಕ್ಷೆ ಮುಖಾಂತರ ಸಮೀಪದಲ್ಲಿರುವ  ಇ- ಶೌಚಾಲಯದ ಸ್ಥಳ, ಅದರ ದೂರ ಹಾಗೂ ಇದನ್ನು ತಲುಪಲು ಇರುವ ದಾರಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಸ್ಮಾರ್ಟ್‌ಫೋನ್ ಮೂಲಕ ಇ-ಶೌಚಾಲಯ ಗಳಿರುವ ಸ್ಥಳವನ್ನು ಅವರ ಮೊಬೈಲ್ ಫೋನ್‌ನಲ್ಲಿ ತಿಳಿದು ಉಪಯೋಗಿಸಲು ಅನುಕೂಲಕರವಾಗಿದೆ ಎಂದು ಮೇಯರ್ ಹೇಳಿದರು. ಇ-ಶೌಚಾಲಯವು ಸ್ಟೈನ್‌ಲೆಸ್ ಸ್ಟೀನ್ ಕವಚ ಹೊಂದಿದ್ದು, ಮಾನವ ರಹಿತ ಸ್ವಯಂಚಾಲಿತ ಫ್ಲೆಷಿಂಗ್ ವ್ಯವಸ್ಥೆ ಹೊಂದಿರುತ್ತದೆ ಎಂದರು.

Write A Comment