ರಾಷ್ಟ್ರೀಯ

ಬಜೆಟ್: ಕರ್ನಾಟಕಕ್ಕೆ ‘ಕೈ’ ಕೊಟ್ಟ ಪ್ರಭು

Pinterest LinkedIn Tumblr

6l9gs610ದೆಹಲಿ: ಎನ್‍ಡಿಎ ಸರ್ಕಾರದ ಬಹುನಿರೀಕ್ಷಿತ 2016-17ರ ರೈಲ್ವೇ ಬಜೆಟ್ ನ್ನು ಸಚಿವ ಸುರೇಶ್ ಪ್ರಭು ಇಂದು  ಮಂಡಿಸಿದ್ದು, ಕರ್ನಾಟಕದ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ.

ಪ್ರಯಾಣದರ ಹಾಗೂ ಸರಕು ಸಾಗಾಟ ದರದಲ್ಲಿ ಯಾವುದೇ ಏರಿಕೆ ತರದ ಸಚಿವ ಸುರೇಶ್ ಪ್ರಭು, ಕರ್ನಾಟಕ ರಾಜ್ಯಕ್ಕೆ ಹೊಸ ಯೋಜನೆಗಳನ್ನೂ ತರಲಿಲ್ಲ, ಅಭಿವೃದ್ಧಿಯ ಬಗ್ಗೆಯೂ ತಿಳಿಸಿಲ್ಲ.ಬೆಂಗಳೂರು ಉಪನಗರ ಪ್ರಸ್ತಾಪ ಬಿಟ್ಟರೆ ಕರ್ನಾಟಕಕ್ಕೆ ಪ್ರಭು ಭಾಗ್ಯ ಶೂನ್ಯವಾಗಿದೆ.

ಬೆಂಗಳೂರು, ಮಂಗಳೂರು, ಶಿರಾಡಿಗೆ ಹೊಸ ರೈಲು ವ್ಯವಸ್ಥೆಯಿಲ್ಲ. ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದ ಅಭಿವೃದ್ಧಿ ಬಗ್ಗೆಯೂ ಪ್ರಸ್ತಾಪವಿಲ್ಲ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬಗ್ಗೆಯೂ ಸುಳಿವಿಲ್ಲ. ಮಾತ್ರವಲ್ಲದೇ ಬೆಂಗಳೂರು-ಮಂಗಳೂರು ರಾತ್ರಿ ರೈಲಿಗೆ ರಾಜ್ಯ ಬೇಡಿಕೆ ಇಟ್ಟಿದ್ದು, ಇಂದಿನ ಬಜೆಟ್ ನಿಂದ ಜನರಿಗೆ ನಿರಾಶೆ ಉಂಟಾಗಿದೆ.

ಪಶ್ಚಿಮ ಬಂಗಾಳ, ಕೇರಳ, ಗುಜರಾತ್ ಹಾಗೂ ತಮಿಳುನಾಡು, ಅಸ್ಸಾಂ, ಪಾಂಡಿಚೇರಿಗೆ ಪ್ರಭು ಭರಪೂರ ಕೊಡುಗೆ ನೀಡಿದ್ದಾರೆ.

Write A Comment