ಕರ್ನಾಟಕ

ಸಾಲಬಾಧೆ: ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

Pinterest LinkedIn Tumblr

farmerಮಂಡ್ಯ,ಫೆ.25- ಸಾಲಬಾಧೆ ತಾಳಲಾರದೆ ರೈತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ನಡೆದಿದೆ. ಹೆಮ್ಮಿಗೆ ಗ್ರಾಮದ ನಿವಾಸಿ ಮಹೇಶ್(48) ಆತ್ಮಹತ್ಯೆ ಮಾಡಿಕೊಂಡ ರೈತ. ಮಹೇಶ್‌ಗೆ ಒಂದೂವರೆ ಎಕರೆ ಜಮೀನು ಇದ್ದು ಬೆಳೆಗಾಗಿ ಬ್ಯಾಂಕ್, ಸಂಘಸಂಸ್ಥೆಗಳಿಂದ 10 ಲಕ್ಷ ಸಾಲ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಾಲ ತೀರಿಸಲಾಗದೆ ಇಂದು ಬೆಳಗ್ಗೆ 6.30ಕ್ಕೆ ಜಮೀನು  ಬಳಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರ ಪುತ್ರಿ ಬಾಂಧವ್ಯ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment