ಕರ್ನಾಟಕ

ಗರ್ಭಿಣಿಯ ಮೇಲೆ ಅತ್ಯಾಚಾರ; ಆರೋಪಿ ಅರೆಸ್ಟ್

Pinterest LinkedIn Tumblr

arre

ಬೆಂಗಳೂರು: ವ್ಯಕ್ತಿಯೋರ್ವ ಗರ್ಭಿಣಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಗರದ ಕಾಟನ್‍ಪೇಟೆಯಲ್ಲಿ ನಡೆದಿದೆ.

ಫೆಬ್ರವರಿ 12ರಂದು ಈ ಘಟನೆ ನಡೆದಿದ್ದು, ಕಾಟನ್‍ಪೇಟೆಯ ನಿವಾಸಿಯಾಗಿರುವ ರಾಜಸ್ಥಾನ ಮೂಲದ ಮಹಿಳೆಯೊಬ್ಬರ ಮೇಲೆ ಹೊಸಕೆರೆಹಳ್ಳಿ ನಿವಾಸಿ ಮಹೇಶ್ ರೆಡ್ಡಿ ಅತ್ಯಾಚಾರವೆಸಗಿದ್ದ. ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಡಿಷ್ ಟಿವಿ ರಿಪೇರಿ ಮಾಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದ ಮಹೇಶ್ ಈ ಕೃತ್ಯವೆಸಗಿದ್ದ.

ಈ ಬಗ್ಗೆ ಕಾಟನ್‍ಪೇಟೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ತಮಿಳುನಾಡಿನ ಮೂಲದವನಾದ ಆರೋಪಿ ಮಹೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Write A Comment