ಧಾರವಾಡ: ಇಲ್ಲಿನ ಶ್ರೀನಗರ ವೃತ್ತದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಿಂದ ಹಣ ಲೂಟಿಗೆ ವಿಫಲ ಯತ್ನ ನಡೆಸಲಾಗಿದೆ.
ಭಾನುವಾರ ಮಧ್ಯರಾತ್ರಿ ಸುಮಾರು 2.30ಕ್ಕೆ ಎಟಿಎಂ ಒಳ ನುಗ್ಗಿರುವ ದುಷ್ಕರ್ವಿುಗಳು ಸೆಕ್ಯೂರಿಟಿಯ ಕೈ ಕಾಲುಗಳನ್ನು ಕಟ್ಟಿ ಹಾಕಿ ಕಳವಿಗೆ ಯತ್ನಿಸಿದ್ದಾರೆ. ಆದರೆ ಹಣ ತೆಗೆಯಲು ಸಾಧ್ಯವಾಗದೆ ಸೆಕ್ಯೂರಿಟಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಗಾಯಾಳು ಸೆಕ್ಯೂರಿಟಿ ಶಿವಕುಮಾರ್ನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.