ಕರ್ನಾಟಕ

ಸ್ಫೋಟಗೊಂಡ ಟಾಟಾ ಏಸ್ : ಇಬ್ಬರ ದುರ್ಮರಣ

Pinterest LinkedIn Tumblr

tata-ace
ಸಾಂದರ್ಭಿಕ ಚಿತ್ರ

ಬೆಳಗಾವಿ: ಟಾಟಾ ಏಸ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಬೆಳಗಾವಿಯ ಭಾತಕಾಂಡೆ ಶಾಲೆಯ ಪಕ್ಕದಲ್ಲಿ ಎಸ್.ಪಿ.ಎಂ. ರಸ್ತೆಯಲ್ಲಿ ನಡೆದಿದೆ.

ಕಾರ್ಖಾನೆಗಳಿಗೆ ಬಳಸುವ ರಾಸಾಯನಿಕ ವಸ್ತುವನ್ನು ಸಾಗಿಸುತ್ತಿದ್ದ ಟಾಟಾ ಏಸ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ ಐವರು ಗಾಯಗೊಂಡಿದ್ದಾರೆ.

ಶೆಟ್ಟಿಗಲ್ಲಿ ನಿವಾಸಿಯಾದ ಬೈಕ್ ಸವಾರ ರಾಜೇಂದ್ರ ಬಾಬುರಾವ್ ಪಾಟೀಲ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರಯೆಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಐವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಟಾ ಏಸ್ ವಾಹನ ಸ್ಫೋಟಗೊಂಡಿದ್ದರಿಂದ ಪಕ್ಕದಲ್ಲಿದ್ದ ಕಾರು ಹಾಗೂ ಐದು ಬೈಕ್ ಜಖಂಗೊಂಡಿದೆ. ಟಾಟಾ ಏಸ್ ವಾಹನದ ಬಿಡಿಭಾಗಗಳು ಸಿಡಿದು ಚೆಲ್ಲಾಪಿಲ್ಲಿಯಾಗಿವೆ.

ಶ್ವಾನದಳ, ಎಸ್.ಎಫ್.ಎಲ್. ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಟಾಟಾ ಏಸ್ ವಾಹನದಲ್ಲಿನ ಸಿಲಿಂಡರಿಗೆ ಬೆಂಕಿ ತಗುಲಿ ಸ್ಫೋಟಗೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ

Write A Comment