ಕರ್ನಾಟಕ

ಪ್ರಣಿತಾ ಕಾರು ಅಪಘಾತ: ಸುರಕ್ಷಿತವಾಗಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ನಟಿ

Pinterest LinkedIn Tumblr

PRANITHA

ಹೈದರಾಬಾದ್: ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದ ನಟಿ ಪ್ರಣಿತಾ ಅವರು ತಾವು ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ.

ಭಾನುವಾರ ನಟಿ ಪ್ರಣಿತಾ ಅವರ ಕಾರು ಹೈದರಾಬಾದ್ ನಸ ಶಂಷಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಅವರು ಗಾಯಗೊಂಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಲವು ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದವು. ಆದರೆ ಅಪಘಾತ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ನಟಿ ಪ್ರಣಿತಾ ಅವರು ಖ್ಯಾತ ಸಮಾಜಿಕ ತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

“ನಾನು ಸುರಕ್ಷಿತವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಪ್ರಸ್ತುತ ಮಿನಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಕಮ್ಮಂ ಜಿಲ್ಲೆಯಲ್ಲಿ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದೆ. ಈ ವೇಳೆ ಮಾರ್ಗ ಮಧ್ಯೆ ಚಲಿಸುತ್ತಿದ್ದಾಗ ಪಲ್ಸರ್ ಬೈಕ್ ವೊಂದು ಅಡ್ಡಬಂತು. ಅದನ್ನು ತಪ್ಪಿಸು ಪ್ರಯತ್ನದಲ್ಲಿ ಕಾರು ಅಪಘಾತಕ್ಕೀಡಾಯಿತು. ಅದೃಷ್ಟವಶಾತ್ ಯಾರಿಗೂ ಏನೂ ಆಗಲಿಲ್ಲ. ಆಶ್ಚರ್ಯಕರ ರೀತಿಯಲ್ಲಿ ನಾನು ಅಪಾಯದಿಂದ ಪಾರಾದೆ. ಕೂಡಲೇ ಸ್ಥಳೀಯರು ನಮ್ಮನ್ನು ಹೊರಗೆಳೆದು ಉಪಚಿರಿಸಿದರು. ನಿಮ್ಮ ಕಾಳಜಿಗೆ ನಾನು ಅಭಾರಿ ಎಂದು ನಟಿ ಪ್ರಣಿತಾ ಫೇಸ್ ಬುಕ್ ನಲ್ಲಿ ಹೇಳಿದ್ದಾರೆ.

Write A Comment