ಬೆಂಗಳೂರು : ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ಜಿಲ್ಲಾಪಂಚಾಯತಿ ಮತ್ತು ತಾಲೂಕು ಪಂಚಾಯತಿಯ ಮೊದಲ ಹಂತದ ಚುನಾವಣೆಗೆ ಮತದಾನ ಶನಿವಾರ ನಡೆಯಿತು. ಚಿತ್ರದುರ್ಗದಲ್ಲಿ ಘರ್ಷಣೆ ,ಅಲ್ಲಲ್ಲಿ ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ವಾಗ್ಯುದ್ಧ ಹೊರತು ಪಡಿಸಿದರೆ ಶಾಂತಿಯುತವಾಗಿ ನಡೆಯಿತು.
ಹೆಬ್ಟಾಳ, ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರ ಹಾಗೂ 15 ಜಿಲ್ಲೆಗಳ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳಲ್ಲಿ ಶನಿವಾರ ಬೆಳಗ್ಗೆ 7 ಗಂಟೆ ಯಿಂದ ಆರಂಭವಾದ ಮತದಾನ ಸಂಜೆ 5ರವರೆಗೂ ನಡೆಯಿತು .
ಸಂಜೆ 5 ಗಂಟೆ ಯ ವೇಳೆಗೆ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ಇದ್ದ ಮತದಾರರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಯಿತು.
ಕೆಲವೆಡೆ ಮತದಾರರ ಪಟ್ಟಿಯಲ್ಲಿ ಗೊಂದಲಗಳು, ಕೆಲವು ಕೇಂದ್ರಗಳಲ್ಲಿ ಮತಯಂತ್ರದಲ್ಲಿ ಗೊಂದಲವೂ ಕಂಡು ಬಂದಿದೆ.
ಫೆಬ್ರವರಿ 20 ರಂದು 2 ನೇ ಹಂತದ ಜಿ.ಪಂ,ತಾ.ಪಂ ಮತದಾನ ನಡೆದು ಫೆಬ್ರವರಿ 23ರಂದು ಫಲಿತಾಂಶ ಹೊರಬೀಳಲಿದೆ.
ಎಲ್ಲಾ ಕ್ಷೇತ್ರಗಳ ಶೇಕಡಾವಾರು ಮತದಾನಪ್ರಮಾಣದ ಬಗ್ಗೆ ಚುನಾವಣಾ ಅಧಿಕಾರಿಗಳು ಇನ್ನಷ್ಟೆ ಮಾಹಿತಿ ನೀಡಬೇಕಿದೆ.
ಚಿತ್ರದುರ್ಗದಲ್ಲಿ ಘರ್ಷಣೆ
ಜಿಪಂಚ ಚುನಾವಣೆ ನಡೆಯುತ್ತಿರುವ ಚಳ್ಳಕೆರೆಯ ಗೊಲ್ಲರ ಹಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಘರ್ಷಣೆಯಲ್ಲಿ 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕೆಲವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ವರಿದಯಾಗಿದೆ.
ಹಣ ಹಂಚುತ್ತಿದ್ದವನನ್ನು ಹಿಡಿದ ನಾರಾಯಣ ಸ್ವಾಮಿ
ಹೆಬ್ಟಾಳ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚಲು ಯತ್ನಿಸುತ್ತಿದ್ದ ಕಾಂಗ್ರೆಸ್ ಬೆಂಬಲಿಗ ಯುವಕನೊಬ್ಬನನ್ನು ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಅವರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಗಲಭೆ ಮಾಡುಲು ಸಿದ್ಧ!
ನಾರಾಯಣ ಸ್ವಾಮಿ ಅವರು ಕಾಂಗ್ರೆಸ್ ಶಾಸಕ ಭೈರತಿ ಬಸವರಾಜ್ ಬೆಂಬಲಿತ ಹುಡುಗರು ಹಣ ಹಂಚುತ್ತಿದ್ದಾರೆ. ಇದರ ವಿರುದ್ದ ನಾವು ರಸ್ತೆಗಿಳಿದು ಗಲಭೆ ಮಾಡಲು ಸಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಆಕ್ರೋಶ ಹೊರ ಹಾಕಿದ ನಾರಾಯಣ ಸ್ವಾಮಿ ಅವರು ಕಾಂಗ್ರೆಸ್ ಕಾರ್ಯಕರ್ತರು ಹೆಬ್ಟಾಳ ಕ್ಷೇತ್ರದ ಬೂತ್‌ಗಳ ಬಳಿಯಲ್ಲೇ ಹಣ ಹಂಚುತ್ತಿದ್ದಾರೆ. ರಿಪಬ್ಲಿಕ್ ಆಫ್ ಬೆಂಗಳೂರು ಮಾಡಲು ಹೊರಟಿದ್ದಾರೆ.ನಾನು ಬೆಂಬಲಿಗರೊಂದಿಗೆ ರಸ್ತೆಗಿಳಿದು ಗಲಭೆ ಮಾಡಲೂ ಸಿದ್ದನಾಗಿದ್ದೇನೆ.ಪೊಲೀಸರು ಅಕ್ರಮಗಳನ್ನು ತಡಯಲು ಸಾಧ್ಯವಾಗದೆ ಮೌನವಾಗಿದ್ದಾರೆ.ಮುಂದಿನ ಅನಾಹುತಗಳಿಗೆ ರಾಜ್ಯಸರ್ಕಾರವೇ ನೇರ ಹೊಣೆ ಎಂದು ಹೇಳಿದ್ದಾರೆ.
ದೇವದುರ್ಗದಲ್ಲಿ 4 .20 ಲಕ್ಷ ಹಣ ವಶಕ್ಕೆ
ಉಪಚುನಾವಣೆ ನಡೆಯುತ್ತಿರುವ ದೇವದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ಎಂಬಲ್ಲಿ ಮತದಾರರಿಗೆ ಹಂಚಲು ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4.20 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
-ಉದಯವಾಣಿ