ಕರ್ನಾಟಕ

ಕೆರೆಯಲ್ಲಿ ಮುಳುಗಿ 3 ವಿದ್ಯಾರ್ಥಿಗಳ ದುರ್ಮರಣ

Pinterest LinkedIn Tumblr

drown

ಉರುಳುಗೆರೆ(ತುಮಕೂರು): ಶಾಲೆಗೆ ರಜೆ ನಿಮಿತ್ತ ಈಜಲು ತೆರಳಿದ್ದ ಏಳನೇ ತರಗತಿಯ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಉರುಳುಗೆರೆ ಗ್ರಾಮದ ಸಮೀಪವಿದ್ದ ಕೆರೆಯಲ್ಲಿ ಮೂವರು ಬಾಲಕರು ತೆರಳಿದ್ದು ಮೃತಪಟ್ಟಿದ್ದಾರೆ.

ಮೃತ ಬಾಲಕರು 13 ವರ್ಷದವರಾಗಿದ್ದು ವೇಣು, ಶಶಿಧರ್ ಹಾಗೂ ಚೇತನ್ ಎಂದು ಗುರುತಿಸಲಾಗಿದೆ. ಇವರೆಲ್ಲಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದರು. ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment